ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕಾರ್ಯ ಪ್ರಶಂಸೆ. vvvvvy rrrrr / • • • - - - - * - * *~ / ” ” ” ' ,' ದ್ವಾರಾ ಅನುಭವದ ವೇಳೆಯಲ್ಲಿ ಇಂದ್ರಿಯಗಳ ವ್ಯಾಪಾರವು ವಸ್ತುವಿನ ಮೇಲೆ ಎಷ್ಟು ಕಾಲವಿರುತ್ತದೆಯೋ ಅಷ್ಟೇ ಕಾಲ ಆ ಸುಖವು ಇರುವುದು, ಉತ್ತರಕ್ಷಣದ ಲ್ಲಿಯೇ ಅದು ಹೋಗುವುದು, ಇಂದ್ರಿಯಗಳು ಮೇಲೆ ಮೇಲೆ ಬರುತ್ತಿರುವ ವಿಷಯ ಗಳ ಸಂಪರ್ಕದಿಂದ ಚಲಿಸುವುದರಿಂದ ಅನುಭವಗಳು ಬೇರೆ ಬೇರೆ ಆಗುತ್ತಲೆ ಹೋಗುವುವು, ಒಂದು ವಿಷಯದ ಮೇಲಿದ್ದ ಸ್ಥಿತಿಯು ಮಾರಿ ಹೋಗುವುದು, ಉದಾಹರಣೆಗಾಗಿ ಒಂದು ನದಿಯ ಪ್ರವಾಹವನ್ನು ನೋಡುತ್ತಿರುತ್ತೇವೆಂದು ಇಟ್ಟು ಕೊಳ್ಳೋಣ, ಆಗ ಪಕ್ಕದ ಮರದ ಮೇಲೆ ಕೂಗಿದ ಕಾಗೆಯ ಕೂಗು ಕಿವಿಗೆ ಬಿದ್ದರೆ ಒಡನೆಯೆ ಮನಸ್ಸು ನದಿಯ ಕಡೆಯನ್ನು ಬಿಟ್ಟು ಆ ಕೂಗಿನ ಕಡೆ ಹೋಗುವುದು, ಕೂಡಲೆ ಎದುರಿಗೆ ಒಂದು ನಾಯಿಯು ಪ್ರವಾಹಕ್ಕೆ ನುಗ್ಗಿ ದರೆ ಹಿಂದಣ ಗಮನವು ಮಾರಿ ಹೋಗಿ ಬೇರೆ ತರದ ಪರಿಚಯಾನುಭವವು ಬರು ವದು. ಹೀಗಿರುವುದರಿಂದ ಇಂದ್ರಿಯಗಳ ಸಹಾಯದಿಂದ ಹೊಂದುವ ಅನುಭವ ವು ಆ ಅನುಭವಕಾಲದವರೆಗೆ ಹೊರತು ಮಿಕ್ಕ ವೇಳೆಯಲ್ಲಿ ನಿಲ್ಲದು, ಇಲ್ಲಿ ಒಂದು ಆಕ್ಷೇಪಣೆ ಹುಟ್ಟುವುದು, ಹಾಗೆ ಆ ಅನುಭವವು ಉತ್ತರ ಕ್ಷಣದಲ್ಲಿಯೇ ಮಾಯವಾ ಗುವುದು ಎಂದರೆ ಅದು ನಾಶವಾಗಿ ಹೋಗುವುದೋ ? ಪುನ: ಉದ್ಭವಿಸುವುದೋ ? ಉದ್ಭವಿಸುವದು, ನಾಶವಾಗುವುದಿಲ್ಲ. ಉದ್ಭವಿಸುವದು ಹೇಗೆಂದರೆ- ಅನುಭವ ಕಾಲದಲ್ಲಿ ಉಂಟಾದ ಸಂಸ್ಕಾರಗಳು ಮನಸ್ಸಿನಲ್ಲಿ ಅವ್ಯಕ್ತವಾಗಿ ಅಡಗಿರುವುವು. ಇತರ ವೇಳೆಯಲ್ಲಿ ಹಿಂದೆ ಅನುಭವಿಸಿದ ಪರಿಚಯಾನುಭವಗಳು ಇಲ್ಲವೇ ಇಲ್ಲ ವೆಂಬದಾಗಿ ತೋರುತ್ತಿದ್ದರೂ ಉತ್ತೇಜನಸಾಮಗ್ರಿಯುಂಟಾದಾಗ ಆ ಸಂಸ್ಕಾರಗಳ ಪ್ರತಿಭಾನಗಳು ಉಂಟಾದಾಗ ನಾವು ಅನುಭವ ವೇಳೆಯಲ್ಲಿ ಅನುಭವಿಸಿದ ಅನು ಭವಗಳು ತಾವಾಗಿಯೇ ಬರುವುವು. ಈ ಕಾಲದಲ್ಲಿ ಇಂದ್ರಿಯದ ಏಕಾಗ್ರತೆಯನ್ನು ಹೋಗಲಾಡಿಸುವ ವಿರೋಧಸಾಮಗ್ರಿಗಳು ಯಾವುವೂ ಇರುವುದಿಲ್ಲ. ಆದ್ದರಿಂದ ಮನಸ್ಸು ಅನುಭವ ವೇಳೆಗಿಂತ ಏಕಾಗ್ರತೆಯನ್ನು ಹೊಂದಿ ಇತರ ಅನುಭವಗಳ ಕಡೆ ಹೋಗದೆ ಆ ಒಂದು ಅನುಭವದಲ್ಲಿಯೇ ನಿಲ್ಲುವುದರಿಂದ ಸುಖವು ಹೆಚ್ಚಾಗಿ ತೋರಬೇಕು ಆದ್ದರಿಂದ ಅದು ಹಾಗೆ ಹೆಚ್ಚಾಗಿ ತೋರುವದು, ಇದೂ ಅಲ್ಲದೆ ಹೀಗೆ ಆಗುವದಕ್ಕೆ ಮತ್ತೊಂದು ಕಾರಣವನ್ನು ಯೋಚಿಸಿರಿ, ಕಷ್ಟ ಪಡದೆ ಸುಖವಿಲ್ಲ, ಹೀಗಿದ್ದರೂ ಎಲ್ಲರೂ ಸುಖಪಡುವದಕ್ಕೆ ಮಾಡಬೇಕಾದ ಶ್ರಮ ವನ್ನು ಅಪೇಕ್ಷಿಸದೆ ಸುಖವನ್ನು ಮಾತ್ರ ಅಪೇಕ್ಷಿಸುವರು. K ಧರ್ಮಸ್ಯ ಫಲ