ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕಾರ್ಯ ಪ್ರಶಂಸೆ. 71 # 1 # # # # # # # # # 4 # ) + * * * * * * * * * * * #1 # \ # # # # # # # # # \ : ಸಲು ಹೊರಟವರು ಕೆಲವರು, ಇವರು ಯಾವತ್ತು ಹಿತೈಷಿಗಳು ಯಾವ ಯಾವ ಇಂದ್ರಿಯವನ್ನು ಅವಲಂಬಿಸಿ ಹೊರಟಿದ್ದರೂ ಮುಖ್ಯವಾಗಿ ಮಾನಸೇಂದ್ರಿಯದ ಸಹಾಯವನ್ನೇ ಇಟ್ಟು ಕೊಳ್ಳಬೇಕು, ಸುಖಜ್ಞಾನವು ಮಾನಸೇಂದ್ರಿಯ ವ್ಯಾಪಾರ ವಾಗಿರಲಾಗಿ ಇವರೆಲ್ಲರೂ ಮಾನಸೇಂದ್ರಿಯದಲ್ಲಿ ತಾತ್ಕಾಲಿಕ ಮಾತ್ರದಲ್ಲಿ ಅನುಭ ವಿಸಲ್ಪಡುವ ಸುಖವನ್ನು ಹೆಚ್ಚಿಸುವದರಲ್ಲಿ ನಿರತರಾದರು, ಸ್ಮರಣವೇಳೆಯಲ್ಲಿ ಸುಖ ವನ್ನು ಹುಟ್ಟಿಸುವ ಶಕ್ತಿಯು ಇವರಿಗೆ ಮೀರಿದ ಶಕ್ತಿಯು, ಮತ್ತು ಸದ್ವಾರಕವಾಗಿ ಮಾನಸೇಂದ್ರಿಯದಲ್ಲಿ ಹುಟ್ಟುವ ಸುಖಕ್ಕಿಂತ ಅದ್ವಾರವಾಗಿ ಮಾನಸೇಂದ್ರಿಯದಲ್ಲಿ ಹುಟ್ಟುವ ಸುಖವು ಘನವಾದದ್ದು, ಸದ್ವಾರಕವಾಗಿ ಹುಟ್ಟುವದು ತಾತ್ಕಾಲಿಕವಾ ದದ್ದು, ಅದ್ವಾರಕವಾಗಿ ಹುಟ್ಟುವದು ಸ್ಮರಣವೇಳೆಯದು, ಇಂದ್ರಿಯದ್ವಾರಾ ಹುಟ್ಟುವ ಸುಖಗಳಲ್ಲಿ ತಾರತಮ್ಯವಿರುವ ಕಾರಣ ಆಯಾ ಇಂದ್ರಿಯಗಳ ಬಲದಿಂದ ಲೋಕಹಿತವನ್ನು ಹುಟ್ಟಿಸಿ ಹೆಚ್ಚಿಸುವದರಲ್ಲಿ ಯತ್ನಿ ಸಿದ ಹಿತೈಷಿಗಳಲ್ಲಿ ತಾರತಮ್ಯ ಗಳನ್ನು ಒಪ್ಪಿಕೊಳ್ಳಬೇಕು. ಹೀಗಿರಲಾಗಿ ಸುಖವನ್ನು ಹೆಚ್ಚಿಸಿ ಲೋಕೋಪಕಾರ ಮಾಡುವ ವಿಷಯದಲ್ಲಿ ನಿರತರಾದ ಹಿತೈಷಿಗಳಲ್ಲಿ:- ಮನೆ, ಮಠ, ಅರಮನೆ, ಆರಾಮಗಳನ್ನು ನಿರ್ಮಿಸಿದ ಕಲಾಜ್ಞರ ಉಪಕಾರವು ಹೆಚ್ಚ, ಬಂಡಿ, ಬೈಸಿಕಲ್, ರೈಲ್‌ಗಳನ್ನು ನಿರ್ಮಿಸಿ ಉಪಕಾರ ಮಾಡಿದ ಕಲಾವಿದರ ಉಪಕಾರವು ಹೆಚ್ಚ, ವೀಣೆ, ಸಾರಂಗಿ, ಹಾರ್‌ಮೋನಿಯಮ್ ಮೊದಲಾದ ಸಂಗೀತ ವಾದ್ಯಗಳನ್ನು ಮಾಡಿದ ಉಪಕಾರಿಗಳ ಉಪಕಾರವು ಹೆಚೋ, ಚಿತ್ರಪಟಗಳನ್ನು ನಿರ್ಮಿಸಿದ ಕಲಾಕುಶಲರ ಉಪಕಾರವು ಹೆಚ್ಚೇ ಕಾವ್ಯಗಳನ್ನು ನಿರ್ಮಿಸಿ ಅದ್ವಾರ ಕವಾದ ಮಾನಸಿಕ ಸುಖವನ್ನು ಹುಟ್ಟಿಸಿ ಆ ಸುಖವನ್ನು ಸ್ಮರಣವೇಳೆಯಲ್ಲಿ ಅತ್ಯತಿಶ ಯವಾಗಿ ಅನುಭವಿಸುವಂತೆ ಮಾಡಿದ ಪರಮೋಪಕಾರಿಗಳಾದ ಕವಿಗಳ ಉಪಕಾ ರವು ಮೇಲೋ ? ಯೋಚಿಸಿರಿ, ಇವರ ಸಮುದಾಯದಲ್ಲಿ ಯಾರು ಅಗ್ರಾಸನವನ್ನು ವಹಿಸುವದಕ್ಕೆ ಅರ್ಹರೋ ನೀವೇ ಹೇಳಿ, ಕವಿಗಳೇ ಕಲಾವಿದರಾದ ಹಿತೈಷಿಗಳಲ್ಲಿ ನಿಪುಣರೆಂದು ಎಲ್ಲರೂ ಒಪ್ಪಿಕೊಳ್ಳಬೇಕು, ಕವಿಗಳೇ ಜೈಸಲಿ! ಅವರ ಕಾರವೇ ಸರ್ವತ್ರ ವ್ಯಾಪಿಸಲಿ ! ಅವರ ಪ್ರಭಾವವೇ ಎಲ್ಲಾ ಕಡೆಯಲ್ಲಿಯೂ ಹರಡಲಿ!