೧೦ ಕವಿಕಾರ್ಯಪ್ರಶಂಸೆ. ಗಳನ್ನೂ ಒಟ್ಟಿಗೆ ಅನುಭವಿಸಲು ಆಶೆ ಇದೆ, ಎಲ್ಲರೂ ಅನುಭವಿಸಿ ಪಟ್ಟ ಸುಖಾನು ಭವಗಳನ್ನು ನಾವೆಲ್ಲರೂ ಸಂಪೂರ್ಣವಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಅನುಭವಿ ಸುವುದಾದರೆ, ನಮ್ಮ ಸುಖವು ಎಷ್ಟು ಮಟ್ಟಿಗೆ ಹೆಚ್ಚುವುದು, ಯೋಚಿಸಿರಿ, ಆದ್ದ ರಿಂದ ಎಲ್ಲರ ಅನುಭವವನ್ನು ಈ ಜೀವಮಾನದಲ್ಲಿಯೇ ಅನುಭವಿಸಬೇಕೆಂಬ ಆಶೆಯು ಯಾರಿಗೆ ತಾನೇ ಹುಟ್ಟದು ? ಆದರೂ ಆ ಅನುಭವಗಳಿಗಾಗಿ, ಅವರವರು ಪಟ್ಟ ಕಷ್ಟಗಳನ್ನು ಯೋಚಿಸಿದರಂತೂ ಅವರವರ ಆಯಾ ಕಷ್ಟಗಳೂ ಬೇಡ, ಅವ ರವರ ಆಯಾ ಸುಖಾನುಭವಗಳೂ ಬೇಡ ಎಂದು ತೋರುತ್ತದೆ, ಹೀಗಿರಲು ಅವರು ಪಟ್ಟ ಕಷ್ಟಗಳಲ್ಲಿ ತಿಲದಷ್ಟು ಕಷ್ಟಕ್ಕೆ ಒಳಗಾಗದೆ, ಅವರ ಅನುಭವಗಳು ಯಾವ ಇನ್ನೂ, ಹೊಂದಬಹುದಾದ ಒಂದು ಸಂಭವವಿದ್ದರೆ, ಯಾರು ತಾನೆ ಅವುಗಳನ್ನು ಬೇಡವೆಂದು ಆ ಅವಕಾಶವನ್ನು ತಳ್ಳಿಬಿಡುವರು? ಆ ಸುಖಾನುಭವವನ್ನು ಅನುಭವಿ ಸಲು ಯಾರು ತಾನೇ ಮುಂದುವರಿಯರು? ತುಸವೂ ತ್ರಾಸವಿಲ್ಲದೆ, ಎಷ್ಟೋ ತನು ಮನ, ಶ್ರಮಗಳೂ, ಧನನಷ್ಟವೂ, ಕಾಲ, ಸಾಹಸಗಳೂ, ಅಪಾಯಗಳೂ, ಬೇಕಾ ಗಿರುವ ಲೋಕದ ಚಿತ್ರಸೃಷ್ಟಿಸ್ಥಿತಿಗಳ ಪರಿಚಯದಮೂಲಕ ಲಭಿಸುವ ಸುಖಾನು ಭವಗಳನ್ನು, ಶ್ರಮಲೇಶವನ್ನೂ ಪಡಬೇಡಿರಿ; ನಾವು ಅಂತಹ ಸುಖಾನುಭವ ಗಳನ್ನು ದಾನಕೊಡುವೆವ, ಕೈನೀಡಿ ತೆಗೆದುಕೊಂಡು ಅನುಭವಿಸಿ, ನಿಮಗೆ ಸೇರಿದ ಜನರಿಗೂ ಕೊಡಿರಿ, ಅವರೊಡನೆ ಕಲೆತು, ಆ ಸುಖವನ್ನು ಅಭಿವೃದ್ಧಿ ಪಡಿಸಿಕೊಂಡು ಆನಂದಪಾರವಶ್ಯವನ್ನು ಹೊಂದಿರಿ. ” ಎಂದು ಹೇಳುತ್ತಾ ನಿಮ್ಮ ಅವಕಾಶವನ್ನು ನಿರೀಕ್ಷಿಸಿ, ಆ ಅನುಭವಗಳನ್ನು ಕೊಡಲು ಕೃಪೆಮಾಡಿ, ನಿಮ್ಮ ಹತ್ತರಕ್ಕೆ ಯಾರಾ ದರೂ ಅಂಥ ಮಹಾತ್ಮರು ಬಂದರೆ, ಅವರನ್ನು ತಿರಸ್ಕರಿಸುವಿರಾ ? ಅವರ ಪರಾ ರ್ಥೈಕ ಪ್ರಯೋಜನವಾದ ದಾತೃತ್ವವನ್ನು ಎಷ್ಟು ಕೊಂಡಾಡುವಿರಿ? ಅವರಲ್ಲಿ ಎಷ್ಟು ಕೃತಜ್ಞತೆಯನ್ನು ತೋರಿಸುವಿರಿ ? ಹಾಗೆ ನಮಗೆ ಹಿತಮಾಡಬೇಕೆಂಬ ಇಚ್ಛೆಯಿಂದ ನಮ್ಮ ಕತ್ತರಕ್ಕೆ ಬರುವ ಹಿತೈಷಿಗಳು ಯಾರಿರುವರು ? ಅವರು ಯಾವ ರೀತಿಯಲ್ಲಿ ಆ ಅನುಭವಾನಂದವನ್ನು ಕೊಡುತ್ತಿರುವರು ? ಆ ಮಹಾತ್ಮರು ಎಲ್ಲಿರುವರು ? ಅವರನ್ನು ನಾವೇ ಹುಡುಕಿ ಕೊಂಡು ಹೋಗಿ, ಆಶ್ರಯಿಸೋಣವೆಂದು ಯತ್ನಿ ಸಲೊಲ್ಲವೇ ? ಆ ಮಹಾತ್ಮರು ನಮ್ಮ ಅನುಗ್ರಹವನ್ನು ನಿರೀಕ್ಷಿಸುತ್ತಾ ಸರ್ವತ್ರ ನಮ್ಮ ಹತ್ತರವೇ ಕಾದಿದ್ದ ರೂ ನಾವು ಅವರ ಕಡೆ ಲಕ್ಷ್ಯಕೊಡುವದಿಲ್ಲ, ನಾವು ಅಂಥ ಗವಾರ್ಂಧರು !
ಪುಟ:ಕವಿಕಾರ್ಯಪ್ರಶಂಸೆ.djvu/೧೯
ಗೋಚರ