ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕವಿಕಾರ್ಯ ಪ್ರಶಂಸೆ. AAAAAAAAAAAA ಕ\\\\n\r\AAAA ರಿಂದ ತೋರಿಸಲು ಆಗಲಿಲ್ಲ, ಅ೦ಗಾ೦ಗಗಳ ಪರಿಣಾಮವೂ, ಸ್ಥಿತಿಭೇದಗಳೂ, ಚಿತ್ರಪಠದಲ್ಲಿ ಅಷ್ಟು ಚೆನ್ನಾಗಿ ಕಂಡುಬರಲಿಲ್ಲ. ಈ ವಿಧವಾದ ನ್ಯೂನತೆಗಳನ್ನು ನಿವಾ ರಣಮಾಡುವುದೇ ಶಿಲ್ಪಿಕರ ಮುಖ್ಯವಾದ ಉದ್ದೇಶವು-ಅವರು ಶಿಲೆ, .ಲೋಹ, ಮಣ್ಣು, ಮರ ಮೊದಲಾದ ದ್ರವ್ಯಗಳಿಂದ ತಾವು ನೋಡಿ ಅನುಭವಿಸಿದ ನೋಟಗಳ ಬಿಂಬಗಳನ್ನು ಮಾಡಿ, ಆ ಚಿತ್ರಿಕರ ಕಾರ್ಯದಲ್ಲಿ ಸಹಜವಾದ ಕೊರತೆಗಳನ್ನು ದೂರೀಕರಿಸಿ, ಪ್ರಕೃತಿಯ ಸಾಕ್ಷಾದ್ದರ್ಶನದಿಂದ ಉಂಟಾಗುವ ಆನಂದವನ್ನು ಲೋಕಕ್ಕೆ ದಾನಮಾಡಿದರು, ಇವರ ಉಪಕಾರವು ಚಿತ್ರಿಕರ ಉಪಕಾರಕ್ಕಿಂತ ಮೇಲಾದ್ದು, ಈ ಶಿಲ್ಪಿ ಕಮಹಾಶಯರಲ್ಲಿ ಪ್ರಗಲ್ಬರಾದವರು ಪರ್ಯಾಲೋಚಿಸಿ ಪ್ರಕೃತಿಪ್ರತಿಕೃತಿಗಳನ್ನು ತೋರಿಸುವ ವಿಗ್ರಹಗಳ ಮೇಲೆ ನೇಂದ್ರಿಯಕ್ಕೆ ವಿಷ ಯವಾದ ಬಣ್ಣಗಳನ್ನೂ ಸಹ ಸೇರಿಸಿ, ಚಿತ್ರಿಕರ ಕಲೆಯಿಂದ ಉಂಟಾದ ಆನಂದ ವನ್ನು ಜತೆಗೊಳಿಸಿದರು. ಇವರಿಬ್ಬರ ಉಪಕಾರದಿಂದ ನಾವೇ ಸಾಕ್ಷಾತ್ತಾಗಿ, ಲೋಕವನ್ನು ಪರಿಚಯಮಾಡಿದ್ದರೆ, ಎಷ್ಟು ಆನಂದವನ್ನು ಹೊಂದುತ್ತಿದ್ದೆವೋ ಅದಕ್ಕಿಂತ ಅನೇಕ ಪಾಲು ಹೆಚ್ಚಾದ ಆನಂದವನ್ನು ಪಡುವೆವು, ಯಾತಕ್ಕೋಸ್ಕರ ಆನಂದವು ಹೆಚ್ಚಾಗಿ ಹುಟ್ಟುವುದು? ಸಾಕ್ಷಾದ್ದರ್ಶನದಲ್ಲಿ ಹುಟ್ಟಿ ದಷ್ಟೇ ಅಥವಾ ಕಡಿಮೆಯಾಗಿಯೇ ಇರಬೇಕಲ್ಲವೇ? ಸ್ವಲ್ಪ ಯೋಚಿಸಿದರೆ ಹೆಚ್ಚಾಗಿಯೇ ಉಂಟಾ ಗಬೇಕು, ಎಂದು ತಿಳಿದು ಬರುವುದು, ನಾವು ಪ್ರಕೃತಿಯ ಯಾವ ಭಾಗವನ್ನು ನೋಡಬೇಕು ? ಆನಂದ ಹುಟ್ಟುವುದಕ್ಕೆ ಅದನ್ನು ಹೇಗೆ ಪರಿಚಯ ಮಾಡಬೇಕು? ಎಂಬುದನ್ನು ಅರಿಯೆವು, ಬೆಟ್ಟದ ಮೇಲೆ ಸೂರ್ಯೋದಯದಲ್ಲಿ ಎಳಬಿಸಲು ಹಸು ರಾದ ಹುಲ್ಲಿನ ಮೇಲೆ ಬೀಳುತ್ತಿದ್ದರೂ ಅನೇಕವೇಳೆ ಅದನ್ನು ನೋಡಿ ಆನಂದ ಪಡಲಿಲ್ಲ, ಬೆಕ್ಕು ಬಟ್ಟಲಿನಲ್ಲಿ ಹಾಲು ಕುಡಿಯುವುದನ್ನು ನೋಡಿ ಸುಖ ಹೊಂದ ಲಿಲ್ಲ, ಮಕ್ಕಳು ಅಂಗಳದಲ್ಲಿ ಕುಣಿ ಕುಣಿದಾಡುತ್ತ ಕೈ ತಪ್ಪಳೆ ಹಾಕುತ್ತ ಆಡುವದರ ಕಡೆಗೆ ನಮ್ಮ ಲಕ್ಷ್ಯವು ಹೋಗಲಿಲ್ಲ. ಚಿತ್ರಿಕರೂ, ಶಿಲ್ಪಿ ಕರೂ, ಅಂಥ ನೋಟಗ ಳನ್ನು ತೋರಿಸಿ, “ ಬುದ್ಧಿಯಿಲ್ಲದ ಜಂತುಗಳೇ, ನೀವು ಏಕೆ ಕಣ್ಣು ಗಳನ್ನು ಹೊಂದಿ ರುವಿರಿ? ಭಗವಂತನು ದಯಪಾಲಿಸಿದ ಕಣ್ಣನ್ನೂ ಉಪಯೋಗಿಸದೆ, ಏಕೆ ವ್ಯರ್ಥ ಮಾಡುವಿರಿ? ೨ ಎಂದು ನಮ್ಮನ್ನು ಶಿಕ್ಷಿಸಿ ಆ ನೋಟಗಳನ್ನು ನೋಡುವಂತೆ ಮಾಡಿ ಬಲಾತ್ಕರಿಸಿ, ಆ ಸುಖಗಳನ್ನು ಅನುಭವಿಸುವಂತೆ ಮಾಡಿರುವರು, ಅವರ ಶಿಕ್ಷೆಯಿಂದ ಶಿಕ್ಷಿತರಾದ ಮೇಲೆಯಲ್ಲವೇ ನಾವು ನಮ್ಮ ಮನೆಗಳ ಮೂಲೆಗಳಲ್ಲಿ