ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕಾರ್ಯ ಪ್ರಶಂಸೆ. ೧೭ •••••••••••••••••••••••••••••• ಗಳ ಬಿಂಬವನ್ನೂ ತರಬಹುದು, ಇಳಿಯುವುದಕ್ಕೆ ಆಗದ ಕಮರಿಯನ್ನೂ, ಹತ್ತುವುದ ಕ್ಯಾಗದ ಬೆಟ್ಟವನ್ನೂ, ಕೂರಜಂತುಗಳಿಗೆ ಆವಾಸವಾದ ಅರಣ್ಯವನ್ನೂ ಚಿತ್ರದಲ್ಲಿ ತೋರಿಸಬಹುದು, ಚಿತ್ರಕರ್ಮದ ನ್ಯೂನತೆಯನ್ನು ಶಿಲ್ಪ ಕರ್ಮವು ನಿವಾರಿಸಿದೆ ಹಾಗೆ ಛಾಯಾಗ್ರಾಹಿಯ ನ್ಯೂನತೆಯನ್ನು ಸಿನಿಮೀಟೋಗ್ರಾಫ್ ಹೋಗಲಾಡಿಸಿತು. ಇದರಂತೆ ಗ್ರಾಮಫೋನ್ ಎಂಬ ರಾಗಗ್ರಾಹಿಯಂತ್ರವು ಸಂಗೀತ ಕಲೆಯ ಕೊರತೆ ಯನ್ನು ಹೋಗಲಾಡಿಸಿ, ಆ ಕಲೆಯ ಆನಂದವನ್ನು ಸರ್ವರಿಗೂ ದಾನಮಾಡಿತು. ಸಮರ್ಥನಾದ ಸಂಗೀತಜ್ಞನ ಹಾಡನ್ನು ಎಲ್ಲರಿಗೂ ಕೇಳಲು ಸುಲಭವಲ್ಲ, ಅಂಥ ವನು ಎಲ್ಲ ದೇಶಗಳಲ್ಲಿಯೂ ಇರುವುದಿಲ್ಲ, ಎಲ್ಲಾ ಕಡೆಗೂ ಬರುವುದಿಲ್ಲ, ಎಲ್ಲಾ ಕಡೆಯಲ್ಲಿಯೂ, ಎಲ್ಲಾ ವೇಳೆಯಲ್ಲಿಯೂ ಹಾಡುವುದಿಲ್ಲ. ಎಲ್ಲೊ ಒಬ್ಬಿಬ್ಬರು ಧನಿಕರು ಕೇಳುವರು, ಅವರ ಎದುರಿಗೆ ಹಾಡುವನು, ಅಂಧ ಮಹಾತ್ಮನು ಹಾಡಿದ ಗಾನದ ಪರಿಪಾಟಿಯನ್ನು ರಾಗಗ್ರಾಹಿಯ ಮೂಲಕ ಎಲ್ಲಾ ದೇಶದ ಬಡವರೂ, ಧನಿಕರೂ ತಮಗೆ ಇಷ್ಟ ಬಂದ ವೇಳೆಯಲ್ಲಿ ಕೇಳಿ ಆನಂದ ಪಡಬಹುದಾಯಿತು. ಆ ಮಹಾನುಭಾವನು ಸತ್ತರೂ ಅವನ ಹಾಡೂ, ಅವನ ಶಾರೀರವೂ ಚಿರಸ್ಥಾಯಿ ಯಾಯಿತು. ಒಬ್ಬನ ಧ್ವನಿಯನ್ನು ಅನುಕಾರ ಮಾಡಲು ಅಸಾಧ್ಯವಾಗಿತ್ತು, ಅದೂ ಸಾಧ್ಯವಾಯಿತು, ವಾದ್ಯಗಳ ಮೇಳದಲ್ಲಿ ಉಂಟಾಗುವ ರಾಗದ ಜಮಾವಣೆಯು ಒಂದು ಯಂತ್ರದಿಂದಲೇ ಆಗುವ ಹಾಗೆ ಆಯಿತು. ಇದೆಲ್ಲವೂ ಪ್ರಕೃತಿ ಶಾಸ್ತ್ರಜ್ಞರ ಉಪಕಾರವಲ್ಲವೇ ? ಅವರ ಆ ಉಪಕಾರಕ್ಕೆ ಅವರನ್ನು ನಾವು ಎಷ್ಟು ಗೌರವಿಸಿ ದರೂ ತೀರದು, ಏವಂಚ ಏನು ಹೇಳಿದ ಹಾಗಾಯಿತು:---- ಹಿತೈಷಿಗಳು ಲೋಕೋಪಕಾರ ಬುದ್ದಿಯಿಂದ ತಾವು ಅನುಭವಿಸಿದ ಸುಖಾನುಭವಗಳು ಬಹುಕಾಲ ನಿಲ್ಲುವಂತೆಯೂ ಸಕಲರಿಗೂ ಸುಲಭವಾಗಿ ಅನುಭವಿಸುವಂತೆಯೂ, ಉಪಾಯಗಳನ್ನು ಕಲ್ಪಿಸಿದರು. ಕಣ್ಣಿಗೆ ತಿಳಿಯುವ ಮರ, ಬೆಟ್ಟ, ಜಲಪಾತ ಮೊದಲಾದುವುಗಳನ್ನು ಚಿರಸ್ಥಾಯಿ ಯಾಗಿ ನಿಲ್ಲುವಂತೆ ಮಾಡುವ ಉದ್ದೇಶದಿಂದ ಚಿತ್ರಿಕರು ಅವುಗಳನ್ನು ಹಲಿಗೆಗಳ ಮೇಲೆ ತೋರಿಸಿದರು, ಈ ಚಿತ್ರಕರ್ಮದ ಕೆಲವು ಕೊರತೆಗಳನ್ನು ಶಿಲ್ಪ ಕಲಾನಿಪು ಣರು ನಿವಾರಿಸಿದರು. ಸ್ವರ ಪರಂಪರೆಯಾದ ರಾಗವು ಚಿರಸ್ಥಾಯಿಯಾಗಿ ನಿಲ್ಲಲು ಸಂಗೀತ ಕಲಾನಿಪುಣರು ಮಾಡಿದ ಉಪಾಯವು ತಿಳಿದೇ ಇದೆ, ಇತರ ಇಂದ್ರಿಯ ಗಳ ಅನುಭವ ಸುಖವನ್ನು ಚಿರಕಾಲ ನಿಲ್ಲಿಸುವುದಕ್ಕೆ ಆಯಾ ಕಲಾಪ್ರವೀಣರ