೧೮ ಕವಿಕಾರ್ಯಪ್ರಶಂಸೆ. Pvvvvvv• • • • • •••••• ,---+ # •v - - - - - - - * - *• + •
- * * * * ೪ + ” , --*- - - - - - ೪ YY ಕ” */*/ -+ * *hy
ಮಾಡಿರುವ ಉಪಾಯಗಳೂ ಅದರಿಂದ ಅವರು ತೋರಿಸಿದ ನೈಪುಣ್ಯವೂ, ಅದರ ವಿಮರ್ಶೆಯಿಂದ ಲೋಕಕ್ಕೆ ಉಂಟಾದ ಸುಖಪರಂಪರೆಯ ಬಹಳ ಹೇಳಬೇಕಾಗಿವೆ. ಅವುಗಳಷ್ಟನ್ನೂ ಇಲ್ಲಿ ಹೇಳಬೇಕಾಗಿಲ್ಲ, ಈ ಮಹನೀಯರು ಇಷ್ಟೊಂದು ಸೌಕ ರವನ್ನೂ ಅನುಭವ ಪರೀವಾಹವನ್ನೂ ಉಪಕಾರ ಮಾಡುತ್ತಿದ್ದರೂ ಅವರ ಉಪ ಕಾರವೆಲ್ಲವನ್ನೂ ಒಟ್ಟುಗೂಡಿಸಿದರೂ ಕವಿಯೆಂಬ ಮಹಾಪ್ರಾಜ್ಞನ ಸಾಮರ್ಥ ಪ್ರಭಾವ ಮತ್ತು ಉಪಕಾರದ ಒಂದು ಅಂಶವನ್ನು ಹೋಲಲಾರದು ಎಂದು ದೃಢ ವಾಗಿ ಹೇಳಬಹುದು, ಚಿತ್ರಿಕನು ತನ್ನ ಅನುಭವವನ್ನು ಮತ್ತೊಬ್ಬನಿಗೆ ಕೊಡಲು ಇಷ್ಟ ಪಟ್ಟರೆ ಅಂಥದರ ಪ್ರತಿಕೃತಿಯನ್ನು ತಂದು ಅವನ ಕಣ್ಣಿನ ಮುಂದೆ ಹಿಡಿಯಬೇಕು. ಹಿಡಿ ಯದಿದ್ದರೆ ಸಾಧ್ಯವಿಲ್ಲ. ಏಕೆ? ನೇತೇಂದ್ರಿಯ ಸುಖವನ್ನು ನೇಂದ್ರಿಯದ ಮಲಕವಾಗಿಯೇ ಹುಟ್ಟಿಸಬೇಕು, ರಾಗಜ್ಜನು ಕರ್ಣೇಂದ್ರಿಯ ಸುಖವನ್ನು ತಾನು ಯಾವರಾಗದಿಂದ ಪಡೆದನೋ ಆ ರಾಗವನ್ನೇ ಮತ್ತೊಬ್ಬನ ಎದುರಿಗೆ ಹಾಡಿ ಅಥವಾ ಹಾಡಿಸಿ ಅನುಭವಿಸಿಸಬೇಕು, ರಸಕಲಾಜ್ಞನು ತಾನು ಅನುಭವಿಸಿದ ರಸನೇಂದ್ರಿಯ ಸುಖವನ್ನು ಅಂಥ ಭಕ್ಯಾದಿಗಳನ್ನು ಮಾಡಿ ತಿನ್ನಿಸಿ ಮತ್ತೊಬ್ಬನಿಗೆ ಕೊಡಬೇಕು, ಈ ರೀತಿಯಲ್ಲಿ ಆಯಾ ಇಂದ್ರಿಯ ಸುಖವನ್ನು ಆಯಾ ಇಂದ್ರಿಯದ ಮೂಲಕವಾಗಿಯೇ ಆಯಾ ಕಲಾಪ್ರವೀಣರು ತೋರಿಸಿ ಅನುಭವಿಸಿಸಬೇಕು, ಒಂದು ಇಂದ್ರಿಯದ ಸುಖವನ್ನು ಬೇರೊಂದು ಇಂದ್ರಿಯದ ಮೂಲಕ ತಿಳಿಸಲು ಆಗುವುದಿಲ್ಲ. ಪ್ರಕೃತಿ ಸ್ವಭಾವವೇ ಅಂಥದು ಒಂದು ಇಂದ್ರಿಯದ ಕಾರ್ಯವನ್ನು ಮತ್ತೊಂದು ಇ೦ದ್ರಿಯವ ಮಾಡುವುದಾದರೆ ಅಷ್ಟು ಇಂದ್ರಿಯಗಳ ಅವಶ್ಯಕತೆ ಇರಲಿಲ್ಲ. ಆಯಾ ಇಂದ್ರಿಯ ಗಳ ಸುಖವನ್ನು ಇತರರು ಅನುಭವಿಸುವಂತೆ ಮಾಡುವಲ್ಲಿ ಇಷ್ಟು ಕಲಾಪ್ರವೀಣರುಗಳ ಸಹಾಯಾವಶ್ಯಕತೆಯೂ ಬೇಕಾಗಿರಲಿಲ್ಲ. ಇನ್ನು ಕವಿಯ ಮಹತ್ವದ ಕಡೆಗೆ ಸ್ವಲ್ಪ ತಿರುಗೋಣ, ಕವಿಯು ಭಗವಂತನ ಸೃಷ್ಟಿ ವೈಚಿತ್ರವನ್ನು ಚೆನ್ನಾಗಿ ಪರಿಶೀಲಿಸಿದನು. ಅವನು ನಾಭಿಕ೦ಠಾದಿಸ್ಟಾನಗ ಇಲ್ಲಿ ಇರುವ ಒಂದು ಶಕ್ತಿ ವಿಶೇಷವನ್ನು ಅವಗಾಹಿಸಿ ಆ ಶಕ್ತಿಯ ಸಹಾಯ ಸಂಪ ತಿನಿಂದ ತನ್ನ ಸಾಮರ್ಥವನ್ನು ಸರ್ವತ್ರ ಬೆಳಗಿ ಇತರ ಕಲಾನಿಪುಣರ ನೈಫು ಗ್ಯವನ್ನು ಹೊಂದಿ ತಾನೇ ಹಿತೈಷಿಗಳ ಚಕ್ರವರ್ತಿ ಎನಿಸಿಕೊಂಡನು. ಕಂಠಾ ದಿಸ್ಥಾನಮತ್ತಾದ ಮುಖದಲ್ಲಿ ಶಬ್ಬೋಚ್ಛಾರಣಶಕ್ತಿಯೊಂದುಂಟು. ಅದೇ ವಾಕ ಕಿ