ಕವಿಕಾರ್ಯಪ್ರಶಂಸೆ, ೧೯
- - * * *
- * *rv 2 •/ # - ••••• / rwx ಅಥವಾ ಮಾತನ್ನಾಡುವ ಸಾಮರ್ಥ್ಯವು, ಮಾತಿಗೆ ಅತ್ಯಾಶ್ಚರ್ಯಕರವಾದ ಒಂದು ಶಕ್ತಿಯುಂಟು, ಮಾತು ಲೋಕದಲ್ಲಿ ಇಂದ್ರಿಯಗಳದ್ವಾರಾ ಪ್ರತ್ಯಕ್ಷವಾದ ಪ್ರತ್ಯಕ್ಷವಾಗುವ ವಿಷಯಗಳನ್ನು ವಾಚಿಸುವದು, ಎಂದರೆ ಇಂದ್ರಿಯದ್ವಾರಾ ಪ್ರತ್ಯಕ್ಷವಾದ ವಿಷಯಗಳನ್ನು ಅಂತರಿಂದ್ರಿಯವಾದ ಮನಸ್ಸಿನಲ್ಲಿ ಪ್ರತಿಭಾಸಿಸು ವುದು; ಎಂದರೆ ಹಿಂದೆ ಅನುಭವಿಸಿದ ಆ ವಿಷಯಗಳನ್ನು ಮನಸ್ಸಿನ ಮುಂದೆ ಪುನ: ಎತ್ತಿತಂದು ತೋರಿಸುವುದು, ಇಂದ್ರಿಗಳಿಂದ ಪರಿಚಯ ಮಾಡಿದ ವಸ್ತು ಗಳ ಸಂಸ್ಕಾರವು ಮನೋಭಿತ್ತಿಯಲ್ಲಿ ನಿಲ್ಲುವುದು, ನಿಂತರೂ ಅವ್ಯಕ್ತವಾಗಿಯೇ ನಿಲ್ಲುವುದು, ಎಂದರೆ ಮನಸ್ಸಿನಲ್ಲಿ ಆ ಸಂಸ್ಕಾರಗಳು ಸರ್ವ ಕಾಲದಲ್ಲಿಯ ಇರುವಂತೆ ತೋರಿಬರುವುದಿಲ್ಲ, ಆದರೂ ಅಲ್ಲಿ ಅವು ಇದ್ದೆ ಇರುವುವು. ಹಾಗೆ ಇರುವ ಆ ಸಂಸ್ಕಾರಗಳ ಸ್ಥಿತಿಯನ್ನು ಅವ್ಯಕ್ತಸ್ಥಿತಿಯೆಂದು ಕರೆಯಬಹುದು, ಇಂದ್ರಿಯಗಳ ಮೂಲಕ ಹೊಂದಿದ ಪರಿಚಯಾನುಭವಗಳು ಆಯಾ ಶಬ್ದ ಗಳ ಶ್ರವಣದಿಂದ ಪುನ: ವ್ಯಕ್ತವಾಗುವುವೆಂದರೆ, ಪ್ರತ್ಯಕ್ಷವೇಳೆಯಲ್ಲಿ ಚಿತ್ರ ಭಿತ್ತಿಯಲ್ಲಿ ಇಂದ್ರಿಯಗಳ ಮೂಲಕ ಪರಿಚಯ ಮಾಡಿದ ವಸ್ತುಗಳ ಚಿತ್ರವು ಶಬ್ದಶ್ರವಣ ಕಾಲದಲ್ಲಿ ಮನೋಭಿತ್ತಿಯಲ್ಲಿ ಹುಟ್ಟುವುದು, ಆ ಚಿತ್ರಕ್ಕೆ ಸಂಸ್ಕಾರವೆಂಬ ಶಬ್ದ ವನ್ನು ಉಪಯೋಗಿಸಿ ಚಿತ್ರ ಸಂಸ್ಕಾರವೆಂದು ಕರೆಯಬಹುದು, ಆ ಸಂಸ್ಕಾರವು ಅವ್ಯಕ್ತಸ್ಥಿತಿಯಲ್ಲಿ ಚಿತ್ತಭಿತ್ತಿಯಲ್ಲಿ ಅವ್ಯಕ್ತವಾಗಿ ನಿಂತಿರುವುದು, ಅವ್ಯಸ್ಥಿತಿ ಯಲ್ಲಿದ್ದ ಆ ಸಂಸ್ಕಾರವನ್ನು ಪುನ: ಗಮನಕ್ಕೆ ತರಲು ಅಥವಾ ವ್ಯಕ್ತವಾಗಿ ಸಲು ಪದಗಳನ್ನು ಇಟ್ಟು ಕೊಂಡಿರುವೆವು, ಆ ಪದಗಳನ್ನು ಕೇಳಿದಾಗ ಕೇಳಿದ ವರ ಚಿತ್ತಭಿತ್ತಿಯಲ್ಲಿ ತಾವು ಹಿಂದೆ ಅನುಭವಿಸಿದ ವಸ್ತುವಿನ ಚಿತ್ತಸಂಸ್ಕಾರಕ್ಕೆ ಸಜಾತೀಯವಾದ ಸಂಸ್ಕಾರವು ತನ್ಮೂಲಕ ಹುಟ್ಟಿದ ಅನುಭವವೂ ಹುಟ್ಟುವುವು. ಇದೇ ವಾಚ್ಯಶಕ್ತಿಯು, ಕುದುರೆ ಎಂಬ ಶಬ್ದವನ್ನು ಒಬ್ಬನು ಉಚ್ಚರಿಸಿದ ಕೂಡಲೆ ಕೇಳಿದವರ ಮನಸ್ಸಿನ ಮುಂದೆ ಕುದುರೆಯ ಆಕೃತಿಯು ತರಲ್ಪಡುವುದು. ಇದೇ ಆ ಶಬ್ದಗ ಶಕ್ತಿಯು, ಕುದುರೆಯು ಓಡುತ್ತಿದೆ; ಕೆಂಪುಬಣ್ಣದ ಅಂಗಿಯನ್ನು ಕರಿಟೊಪ್ಪಿಗೆಯನ್ನು ಹಾಕಿಕೊಂಡ ಸವಾರನು ಓಡಿಸುತ್ತಾನೆ ” ಎಂಬ ವಾಕ್ಯ ಶ್ರವಣಾನಂತರದಲ್ಲಿ ಏನಾಗುವುದು; ವಿಚಾರಿಸಿರಿ, ಮೊದಲು ಒಂದು ಕುದುರೆಯ ಚಿತ್ರವೂ, ಬಳಿಕ ಅದರ ಸವಾರನು, ಅನಂತರ ಅವನ ರೂಪವು, ಆಮೇಲೆ ಅವನ ಟೊಪ್ಪಿಗೆಯೂ, ಅವನ ಅಂಗಿಯೂ ಅವನು ಕುಳಿತಿರುವ ಸಿ ತಿಯ, ಆ ಮೇಲೆ