ಕವಿಕಾರ್ಯ ಪ್ರಶಂಸೆ. . \ ೧/೧೧//, ಕುದುರೆಯ ಓಡುವಿಕೆಯ, ಇವುಗಳ ಪ್ರತಿಕೃತಿಯು ಮನಸ್ಸಿನಲ್ಲಿ ಒಂದೊಂದಾಗಿ ಪ್ರತ್ಯಕ್ಷ ಸಮಾನಾಕಾರವಾಗಿ ಉಂಟಾಗುತ್ತಿದೆ. ಕೇಳಿದವರು ತಾವೇ ಸಾಕ್ಷಾತ್ತಾಗಿ ನೋಡಿದ್ದರೆ ಹೇಗೋ ಹಾಗೆಯೇ ಅವುಗಳ ಸಂಸ್ಕಾರವನ್ನು ಹೊಂದುವರು, ನಮ್ಮ ಅಭಿಪ್ರಾಯಗಳನ್ನೆಲ್ಲ ಸ್ವಲ್ಪವೂ ತಪ್ಪದೆ ಇತರರ ಮನಸ್ಸಿಗೆ ಗೋಚರವಾಗು ವಂತೆ ಮಾಡುವ ರೀತಿಯೇ ಇದು, ಹೀಗೆ ಪದಗಳ ಸಮುದಾಯದಿಂದ ನಮ್ಮ ಅಭಿಪ್ರಾಯವನ್ನು ಬೋಧಿಸುವ ಪದಶಕಿಯು ವಾಚ್ಯ ಶಕ್ತಿ ಎನ್ನು ವುದು. ಈ ಪದ ಶಕ್ತಿಯೇ ಕವಿಗಳ ವಜ್ರಾಯುಧವು, ಬಾಹ್ಂದ್ರಿಗಳಿಂದುಂಟಾಗುವ ಸಕಲ ವಿಧ ವಾದ ಅನುಭವಗಳನ್ನೂ ಕೆಲವು ಪದ ಸಂಯೋಗದಿಂದ ಪಾಠಕರ ಚಿತ್ತಭಿತ್ತಿಯಲ್ಲಿ ಬಾಹ್ಂದ್ರಿಯಗಳ ಸಹಾಯವಿಲ್ಲದೆಯೂ, ಚಿತ್ರ ಪಠಾದಿಗಳ ಸಹಾಯವಿಲ್ಲದೆಯ ಅಲ್ಪ ಸ್ವಲ್ಪ ಶ್ರಮವನ್ನು ಕೊಡದೆಯೂ, ತಮ್ಮ ಪರಿಚಯವನ್ನೂ ತಮ್ಮ ಅಭಿಪ್ರಾಯ ವನ್ನೂ, ತಾವು ಅನುಭವಿಸಿದ ಸುಖಗಳನ್ನೂ, ಹೊಂದುವಂತೆ ಮಾಡಿದವರು ಮಹಾಕುಶಲರಲ್ಲವೇ ? ಒಂದೊಂದು ವಿಷಯಕ್ಕೆ ಗೋಚರವಾಗುವ ಪದಾರ್ಥದ ಗುಣಗಳನ್ನು ಬುದ್ದಿ ಬಲದಿಂದ ಒಟ್ಟು ಗೂಡಿಸಿ ಒಮ್ಮೆಯೇ ಅವುಗಳ ಪರಿಚಯಾನು ಭವವನ್ನು ತಮ್ಮಂತೆಯೇ ತಮ್ಮನ್ನಾ ಶ್ರಯಿಸಿದವರು ಉಳಿದ ಕಡೆಯಲ್ಲಿಯೇ ಹೊಂದುಂವತೆ ಮಾಡುವುದು ಬಾಯಿಮಾತೇ ? ಹೀಗೆ ಯಾರು ಮಾಡಬಲ್ಲರು ? ಕವಿ ಯೊಬ್ಬನೇ ಮಾಡಬಲ್ಲನು. ಇದೂ ಅಲ್ಲದೆ ಒಂದು ಇಂದ್ರಿಯದ ಸುಖವನ್ನು ಮತ್ತೊಂದು ಇಂದ್ರಿಯವು ತಿಳಿಸಿದಷ್ಟೇ ಕವಿಯು ಶಬ್ದ ಶಕ್ತಿಯಿಂದ ಎಲ್ಲಾ ಇಂದ್ರಿ ಯದ ಸುಖವನ್ನು ಮಾನಸೇಂದ್ರಿಯವೆಂಬ ಒಂದು ಇಂದ್ರಿಯದಿಂದಲೇ ತಿಳಿಸಬ ಲ್ಲನು. ಲೋಕಪ್ರತ್ಯಕ್ಷದ ಸಂಸ್ಕಾರಗಳೆಲ್ಲವೂ ಮನೋಭಿತ್ತಿ ಎಂಬ ಒಂದೇ ಆಶ್ರಯದಲ್ಲಿ ನಿಲ್ಲುವುವಾದ್ದರಿಂದ ಒಂದು ಇಂದ್ರಿಯ ವ್ಯಾಪಾರವನ್ನು ಮತ್ತೊಂದು ಇಂದ್ರಿಯ ವ್ಯಾಪಾರದಿಂದ ಸೂಚಿಸಿ ವಿನಿಮಯ ಮಾಡಬಹುದಾಯಿತು. ನೇವಿ ಚಂದ್ರನು “ ಕಿವಿಯಿಂ ದೀಂಟಿಸುವರ್ ಸಮಸ್ತರಸಮಂ ?” ಎಂದು ಕವಿಗಳನ್ನೂ ಕೇಶಿರಾಜನು “ ಅವಾವಿಂದ್ರಿಯದ ಸುಖಮಂ ಪ್ರೋತ್ರದೊಳುದ್ಭಾವಿಪವಾಗ್ಗ ವಿಗೆ ” ಎಂದು ಕವಿಗಳ ದೇವತೆಯಾದ ಸರಸ್ವತಿಯನ್ನೂ ಸ್ತೋತ್ರಮಾಡಿರುವುದರಲ್ಲಿ ಎಷ್ಟು ಅಭಿಪ್ರಾಯವಡಗಿರುವುದು, ಈ ಕವಿಗಳ ವಾಕ್ಯಗಳನ್ನು ಕೇಳಿ;
ಪುಟ:ಕವಿಕಾರ್ಯಪ್ರಶಂಸೆ.djvu/೨೯
ಗೋಚರ