ಕವಿಕಾರ್ಯ ಪ್ರಶಂಸೆ ೨೩ ny - * - -+r - - - - ".' .. . . . - ' %: +• ••••. ವಾದ ವಸ್ತುಗಳು ಜಿಗುಪ್ಪಿ ತವಾಗಿಯೂ, ದುಸ್ಸಹವಾದುವುಗಳು ದುಸ್ಸಹಗಳಾ ಗಿಯೂ, ದು:ಖಜನಕಗಳಾದುವು ದು:ಖಜನಕಗಳಾಗಿಯೂ ಇರುವುವು. ಇವೆಂ ದೆಂದೂ, ಆನಂದಜನಕಗಳಾಗವು, ಜಿಂಕೆಯ ಮೇಲೆ ಬಿದ್ದು ಅದರ ರಕ್ತವನ್ನು ಹೀರುತ್ತಿರುವ ಹುಲಿಯನ್ನು ಸಾಕ್ಷಾತ್ತಾಗಿ ಎದುರಿಗೆ ನಿಂತುನೋಡಲು ಕಾಡಿಗೆ ಹೋಗುವವರು ಯಾರು ? ಕೊಳೆತು ನಾರಿ ಹುಳುಗಳು ಎರಿವಿರಿಯೆಂದು ಮೊದಕು ತಿರುವ ಕತ್ತೆಯ ಶವವನ್ನು ನೋಡಲು ಯಾರು ಇಷ್ಟ ಪಡುವರು ? ಸಹಾರಾಮರಳು ಗಾಡಿನ ಬಿಸಿಲಿನ ತಾಪವನ್ನು ಸಹಿಸಲು ಯಾರು ಒಪ್ಪುವರು ? ಅಲ್ಟ್ ಬೆಟ್ಟದ ಶಿಖ ರದಲ್ಲಿಯೂ, ಉತ್ತರ ಸಾಗರದಲ್ಲಿಯೂ ಹಿಮದ ಗಡ್ಡೆಗಳ ನಡುವೆ ಸಿಕ್ಕಿ ಸೇಡು ಗೊಂಡು ಪ್ರಾಣಬಿಡುವಷ್ಟು ಸಹನೆ ಯಾರಿಗುಂಟು ? ಆ ಪ್ರಾಣಬಿಡುತ್ತಿರುವ ಬಡ ವರ ಸಂಕಟಗಳನ್ನು ನಿಂತು ನೋಡುವಷ್ಟು ಯಾರಮನಸ್ಸು ಕಠಿಣವಿರುವುದು ? ಹೀಗಿದ್ದರೂ ಮೇಲೆ ಹೇಳಿದ ವಿಷಯಗಳ ವರ್ಣನೆಗಳು ಯಾವ ಕವಿಗೆ ತಾನೆ ಮಹ ತ್ವವನ್ನು ತಾರವು ? ಆ ವರ್ಣನೆಗಳನ್ನು ಓದಿ, ಓದಿ ಆ ಪ್ರತಿಕೃತಿಗಳ ಪ್ರತಿಭಾನಗ ಇನ್ನು ಮನಸ್ಸಿಗೆ ತಂದುಕೊಂಡು ಮನನಮಾಡಿ ಅನಂದಪಡುವ, ಎಂದು ಯಾವ ಸಹೃದಯನು ಉತ್ಸಾಹಿಸುವುದಿಲ್ಲ? ಕವಿಕಾರ್ಯದ ನಾಮರ್ದವನ್ನು ಸ್ವಲ್ಪು ಯೋಚಿಸಿ ನೋಡಿದರೆ, ಕಾರಣವು ಗೊತ್ತಾಗದೆ ಇಲ್ಲ. ಕಾಡಾನೆಯ ವರ್ಣನೆ ಯೊಂದನ್ನು ದೃಷ್ಟಾಂತಕ್ಕೆ ತೆಗೆದುಕೊಳ್ಳೋಣ: ಸಲಗನು ಭಯಂಕರವಾದ ಅಡ ವಿಯ ನಡುವೆ ನದಿಯ ತೀರದಲ್ಲಿ ನಿಂತು ಅಲ್ಲಿದ್ದ ಒಂದು ಅತ್ಯುನ್ನತವಾದ ಮರ ವನ್ನು ಬುಡಸಹಿತ ಉರುಳಿಸಿ ಅದರ ಸೊಪ್ಪನ್ನು ಸೊಂಡಿಲಿನಿಂದ ಕಿತ್ತು ಕಿತ್ತು ತನ್ನ ಯಥದಲ್ಲಿದ್ದ ಮರಿಗಳಿಗೆ ನೀಡುತ್ತಲೂ, ಆ ಮರಿಗಳು ಅತ್ತಿತ್ತ ಚದುರದಂತೆ ಕಣ್ಣೆ ಕಾವಲಾಗಿ ನೋಡುತ್ತಲೂ ಒಂದು ಸಣ್ಣ ಧ್ವನಿಗೂ ಹೆದರಿ ತನ್ನ ಗುಂಪನ್ನು ಬೇಗಬೇಗನೆ ಮತ್ತೊಂದು ಕಡೆಗೆ ಸಾಗಿಸುತ್ತಲೂ ಇರುವುದನ್ನು ನೋಡುತ್ತಿರುವ ದರಲ್ಲಿ ಆನಂದಾತಿಶಯವು ಹುಟ್ಟುತ್ತಿದ್ದರೂ ಆ ಆನೆಯ ಗುಂಪು ನಮ್ಮ ಕಡೆಗೆ ಬಂದ ರೇನು ಗತಿ ? ಎಂಬ ಭಯವು ಆಗಲೆ ಹುಟ್ಟಿ ಆ ಆನಂದವನ್ನು ಮೆಟ್ಟಿ ತಾನೇ ತಾನಾಗಿ ಕಾಣಿಸಿಕೊಳ್ಳು ವುದು; ಎದೆಯು ದಡಬಡ ಎನ್ನು ವುದು; ಉಸಿರು ಕೂಡ ಹೊರಡದು, ಆ ಕಾಡಾನೆಯನ್ನು ಚಿತ್ರಿಕನ ಕಾಗದದ ಮೇಲೆ ರಚಿಸಿದ ಚಿತ್ರಪಟದ ಲ್ಲಿಯೂ, ಕವಿಯಿಂದ ವಾಡ್ಯೂಲಕ ಮನೋಭಿತ್ತಿಯಲ್ಲಿ ರಚಿಸಲ್ಪಟ್ಟ ಚಿತ್ರಿಸಟದ ಲ್ಲಿಯ ಸಾಕ್ಷಾತ್ಕರಿಸಿದಾಗ ಆ ಅಪಾಯ ಭೀತಿಯು ಎಲ್ಲಿಯೋ ಮಾಯವಾಗಿ ಆ ಆನಂದವು ಪುಷ್ಟವಾಗಿ ತಾನೇ ತಾನಾಗಿ ತಲೆಯೆತ್ತುವುದು, ಚಿತ್ರಿಕನೂ, ಶಿಲ್ಪಿ ಕ
ಪುಟ:ಕವಿಕಾರ್ಯಪ್ರಶಂಸೆ.djvu/೩೨
ಗೋಚರ