ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9೪ ಕವಿಕಾರ್ಯ ಪ್ರಶಂಸೆ.

  • # \ # * * *
  1. / y YY #

ನೂ ಕವಿಯ ಭಯಸ್ಥಾನದಲ್ಲಿ ಉತ್ಸಾಹವನ್ನು ಇಟ್ಟು ಆ ಪರಿಚಯದ ಆನಂದವನ್ನು ಹೆಚ್ಚಿಸುವರು, ಹೀಗೆಯೇ ಜಿಗುಪ್ಪಿತವಾದ ವಸ್ತುವಿನಲ್ಲಿ ಜಿಗುಪ್ಪೆಗೆ ಕಾರಣವನ್ನೂ ತನ್ಮೂಲಕವಾಗಿ ಹುಟ್ಟುವ ನಿರೋಧಪ್ರವೃತ್ತಿಯನ್ನೂ ನಿರ್ಮೂಲಿಸುವರು, ಲೋಕ ವನ್ನು ಸಾಕ್ಷಾತ್ತಾಗಿ ನೋಡುವುದಕ್ಕಿಂತ ಕಲಾದ್ವಾರಾ ನೋಡುವುದು ಮಹಿಮಾ ಧಾಯಕವು, ಕಲೆಗಳಲ್ಲಿರುವ ಮುಖ್ಯವಾಗಿ ಕಾವ್ಯಕಲೆಯಲ್ಲಿ ಕಂಗೊಳಿಸುವ ಈ ಮಹಿಮೆಯನ್ನು ದಶರೂಪಕಕಾರನು ಸಂಗ್ರಹಿಸಿ ಹೀಗೆ ಹೇಳುತ್ತಾನೆ. ರಮ್ಯಂ ಜಿಗುಪ್ಪಿ ತಮುದಾರಮಥಾಪಿನೀಚ | ಮುಗ್ರಂ ಪ್ರಸಾದಿಗಹನಂ ವಿಕೃತಂ ಚ ವಸ್ತು | ಯದ್ವಾ ಪ್ಯವಸ್ತು ಕವಿಭಾವಕಭಾವ್ಯಮಾನಂ । ತನ್ನಾಸ್ತಿಯನ್ನ ರಸಭಾವಮುಪೈತಿಲೋಕೇ || ತಿರುಮಲಾರ್ಯನು, ಕಡುಪಿಂ ಕೂರಾನೆ ಕಾಲ್ಕಿ ರ್ಚೇಡವಿ ಬರಸಿಡಿಲ್ ಬಳ್ಳಿ ಮಿಂಚೆಂಬಿವೆಲ್ಲರಿ | ಪಡೆಗುಂ ನೋಳ್ವರ್ಗೆಮೇಣುಬೈಗದೊದವನವೇ ಮತ್ತಮೊಳಬ್ಬದೊಳ್ಳಂ | ದೊಡನೆಳ್ಳಂ ಪೆತ್ತುಮಾಳ್ಳುಂ ಸಹೃದಯಹೃದಯಾ ಹ್ಲಾದಮಂ ನಾಡೆಯಂತಾ। ದೊಡಮಳ್ಳೇಂ ಕಬ್ಬಿಗರ್ತಾಮಘಟಿತಘಟನಾ ನೂತನ ಬ್ರಹ್ಮರಿ | ಎಂದೂ ; ಭಾಸ್ಕರನು ಜೀವಂಧರ ಚರಿತ್ರೆಯಲ್ಲಿ; « ಬಿಸಜ ಸಂಭವಷಡ್ರಸವನಿ | ರ್ಮಿಸಿಕವೀಶ್ವರ ಧಾತ್ರಿಯೊಳುನವ || ರಸವಸ್ಸಜಿಸಿದೊಡಾಚತುರ್ಮುಖನಿಂದ ಕವಿವರರು || ವಸುಧೆಯೊಳು ಸರಿಮಿಗಿಲೆನಿಸಿಪಸ | ರಿಸಲುಲೋಕತ್ರಯವು ಸತ್ನವಿ | ಯೆಸಗಿದಂದದೊಳೊಪ್ಪಿಹುದು ತಿಳಿದರೆ ಧರಿತ್ರಿಯಲಿ || ಎಂದೂ ಹೇಳುತ್ತಾರೆ, ಇವರು ಹೇಳುವ ಹಾಗೆ ಲೋಕದ ಎಂಥ ವಿಷಯಗಳೂ ಹೃದಯಂಗಮವಾಗದೆ ಇರವು.

  • ಪ್ರಕ್ರಸ-ಜಿಂದ್ರಿಯ ಪ್ರತ್ಯಕ್ಷವಾದುದು, ನವರಸ,-ಮಾನನೇಂದ್ರಿಯ ಪ್ರತ್ಯಕ್ಷವಾ ದುದು, ಜಿಹೇಂದ್ರಿಯ ಸುಖಕ್ಕಿಂತ ಪ್ರಬಲಸುಖವನ್ನು ಕೊಡುವುದು,