೨೬ ಕವಿಕಾರ್ಯ ಪ್ರಶಂಸೆ. ಕವಿಗಳು ವರ್ಣಿಸುವ ಪ್ರಕಾರವೇ ಚಮತ್ಕಾರವಾಗಿರುವುದು. ಈ ಪದ್ಯಗ ಳನ್ನು ಕೇಳಿರಿ:- ಮಾವಿನ ಮರದ ವರ್ಣನೆ: ಅಸದಳವಾಯ್ತು ರೂಪಮದಮಗ್ಗಳವಾದುದು ಯೌವನೋದಯಂ || ಮೊಸಸಿರಿವಂತ ನಾಸಿರಿಯುವಂ ಜನಕಂ ಮಧುಕೊಟ್ಟನಿಂ ವಿಚಾ || ರಿಸುಗುಮೆ ಚೂತನೊಲ್ಲು ಮೊರೆಗುಂ ಗಿಳಿಯಂ ಮುಖರಾಗಿಯಂ ಮಧು | ವ್ಯಸನಿಮುದಾಳಿಯಂ ಸಹಜವಕ್ರವಚಸ್ವಿಯ ನನ್ಯಪುಷ್ಯನಂ || ಅರುಣೋದಯ ವರ್ಣನೆ: ಹರಿದ್ವ ಶಂ ಬಂದಪಂ ವಾಹಳಿಗೆ ಮುತರುಣಂ ಮೈಮವಿಸ್ತೀರ್ಣರಂಗಾಂ | ತರವೀಥಿಚ್ಛನ್ನ ತಾರಾಸ್ಪತಕಶಕಲಮಂ ನೂಂಕುತುಂ ಚಾರುಚಾಮಿ | ಕರಯಂತ್ರವಾತದಿಂ ಕುಂಕುಮಘನರಸಮಂ ಸಿಂಪಿಸುತ್ತಿರ್ದನೆಂಬಂ ! ತಿರಲೆಂ ನೀಳು ಮೊನ್ನೈ ತುದಯ ಸಮಯದೊಳ್ ಶೋಣಸೂ ರ್ಯಾಂಶುಜಾಲಿಂ | ಈ ರೀತಿಯಲ್ಲಿ ಅನೇಕ ಉದಾಹರಣೆಗಳನ್ನು ಕೊಡಬಹುದು. ಒಳ್ಳೇನು ? ಅವರ ವರ್ಣ ನಾವೈಖರಿಯು ಹಲವಿಧವಾಗಿರುವುದು. ಕವಿಯಿಂದ ವರ್ಣಿಸಲ್ಪಟ್ಟು ರಸಭಾವವನ್ನು ಹೊಂದದೆ ಇರುವ ವಸ್ತು ವೇ ಪ್ರಪಂಚದಲ್ಲಿಲ್ಲ. ಈ ವಿಷಯವನ್ನು ವಿಸ್ತಾರವಾಗಿ ನಾನು ಬರೆದಿರುವ ( ಕವಿ ಸಮಯ ” ಎಂಬ ಗ್ರಂಧದ ಪ್ರಥಮಭಾಗದಲ್ಲಿ ಉಪಪಾದಿಸಿರುವೆನು, ಕವಿಕಾರ್ಯ ಫಲವಾದ ವರ್ಣನೆಗಳನ್ನು ಓದಿದಷ್ಟು ಆನಂದವು ಹೆಚ್ಚು ವುದಲ್ಲದೆ ಪೂರ್ವದಲ್ಲಿ ಪಟ್ಟ ಆನಂದವು ಜ್ಞಾಪಕಕ್ಕೆ ಬರುತ್ತಿರುವುದು, ಆ ಆನಂದವು ಸ್ಮರಣವೇಳೆಯ ದಾದ್ದರಿಂದ ಮಿತಿಮೀರಿದಂತೆ ತೋರುವುದು, ಇಂಥ ಸಂಗತಿಯು ಚಿತ್ರಕರ್ಮಾದಿ ಇತರ ಕಲೆಗಳಲ್ಲಿ ಹುಟ್ಟಿದರೂ ಇಷ್ಟು ಮಟ್ಟಿಗೆ ಹುಟ್ಟದು, - ಕವಿಕಾರ್ಯಕ್ಕೆ ಸಹಜವಾದ ಈ ಅತಿಶಯವನ್ನು ಕವಿಕಾರ್ಯ ಮಹಿಮೆಯನ್ನು ಬಲ್ಲ ಕವಿಶ್ರೇಷ್ಟನಾದ ಕಾಳಿದಾಸನು ಶಕುಂತಳೆಯ ಸೌಂದರ್ಯವರ್ಣನಾವಸರ ದಲ್ಲಿ ಸೂಚಿಸಿರುವನು.
ಪುಟ:ಕವಿಕಾರ್ಯಪ್ರಶಂಸೆ.djvu/೩೫
ಗೋಚರ