ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕಾರ್ಯ ಪ್ರಶಂಸೆ. ಕವಿಗೂ ಮನದಲ್ಲಿ ಹುಟ್ಟಿದಷ್ಟು ಅನುಭವವನ್ನು ಅವನ ಮಹತ್ವದ ಮಾತೂ ತಿಳಿಸಲಾರದು, ಅನೇಕ ಸಹೃದಯರು ( ಆ ಮಹಿಮನ ಮನದಲ್ಲಿ ಏನು ಭಾವ ವೋಡಿತೋ? ” ಎಂದು ಕವಿಯ ವಾಕ್ಯದಲ್ಲಿ ಮರುಳಾಗಿ ಹೋಗಿರುವರು. ಕವಿ ಯಾಗಿಯೂ ಸಹೃದಯನಾಗಿಯೂ ಇದ್ದದ್ದರಿಂದ ಕಾಳಿದಾಸನು " ಚಿತ್ರೀನಿವೇಶ್ಯ ಪರಿಕಲ್ಪಿತಸತ್ವ ಯೋಗಾ ?” ಎಂದು ಮೊದಲು ಹೇಳಿದ್ದು ಸರಿಯಲ್ಲ; “ ಮನಸಾಕ್ಷ್ಯ ತಾನು? ?” ಎಂದರೆ ಮನಸ್ಸಿನಲ್ಲಿ ಚಿತ್ರಿಸಿ ಅದಕ್ಕೆ ಜೀವಕಳೆಯನ್ನು ತುಂಬಿ ಬ್ರಹ್ಮನು ನಿರ್ಮಿಸಿರಬೇಕು; ಎಂದು ಹೇಳಬೇಕಾಗಿತ್ತು, ಎಂದು ಹೇಳುವನು, ತಿರಿಗಿಯ ಯೋಚಿಸುವನು. ಈ ವರ್ಣನೆಯಲ್ಲಿಯೂ ತೃಪ್ತಿ ಹೊಂದದೆ ( ' ರೂಷೋಚ್ಚಯೇನ ವಿಧಿನಾ ಮನಸಾಕೃತಾನು? ”) ರೂಷೋಚ್ಚಯೇನ ಎಂಬುದೊಂದು ವಿಶೇಷಣ ವನ್ನು ಸೇರಿಸುವನು, ಈ ವಿಶೇಷಣದಿಂದ ಏನು ಔಚಿತ್ಯ ಬಂದಿತು ವಿಚಾರ ಮಾಡೋಣ, ಆರ್ಯಕ್ಷೇಮಿಶ್ವರನು “ ದೃಷ್ಟಂ ಕಿಮಪಿ ಲೋಕೇಸ್ಮಿನ್ ನ ನಿರ್ದೋಷಂ ನ ನಿರ್ಗುಣಂ ” ಎಂದು ಹೇಳುವಂತೆ ಸಮಸ್ತ ಭಾಗದಲ್ಲಿಯೂ ಅನ್ನೂನಾತಿರಿಕ್ತವಾಗಿ ಮನೋಹರತೆಯನ್ನೆ ಹೊಂದಿರುವ ಪದಾರ್ಥವು ಲೋಕ ದಲ್ಲೇ ಇಲ್ಲ. ಆಹ್ಲಾದಕವಾದ ಚಂದ್ರಬಿಂಬದಲ್ಲಿಯ ಕಳಂಕವಿರುವುದು, ಸುವಾ ಸನೆಯುಳ್ಳ ಗುಲಾಬಿ ಹೂವೂ ಮುಳ್ಳುಗಳ ಮಧ್ಯದಲ್ಲಿ ಬೆಳೆಯುವುದು, ರಮಣೀಯ ವಾದ ನದಿಯ ಪ್ರವಾಹಗಳಲ್ಲಿಯೂ ಅಪಾಯಭೀತಿಯು ಇರುವುದು, ಕೋಮಲ ವಾಗಿ ಶ್ಲಾನ್ಯವಾದ ವಾಸನೆಯುಳ್ಳ ಮಲ್ಲಿಗೆಯ ಮುಟ್ಟಿದರೆ ಕಂದಿನಾರುವುದು, ಸರಸವಾದ ಗುಣಗಳು ವಿರಸವಾದ ಗುಣಗಳೊಡನೆಯೇ ವಸ್ತುಗಳಲ್ಲಿ ಬೆರಸಿಯೇ ಇರುವುವು, ಆಹ್ಲಾದ ವಸ್ತುಗಳನ್ನು ಮನಸ್ಸಿನಲ್ಲಿ ತಂದುಕೊಂಡಾಗ ಅವುಗಳಲ್ಲಿ ರುವ ವಿರಸಗುಣಗಳೊಡನೆಯೇ ಸರಸಗುಣಗಳು ಮನಸ್ಸಿಗೆ ಪ್ರತಿಫಲಿಸುವುವು. ಅದಕ್ಕಾಗಿ ಕವಿಯು CC ರೂಷೋಚ್ಚಯೇನ ?” ಎಂಬ ವಿಶೇಷಣವನ್ನು ಸೇರಿಸಿ ಆ ವಿಶೇಷಣ ಬಲದಿಂದ ವಿರಸಗುಣಲೇಶವೂ ಮನಕ್ಕೆ ಬಾರದಂತೆಯೂ, ಸರಸ ಗುಣಗಳೇ ಗೋಚರಿಸುವಂತೆಯೂ, ಮಾಡಿರುವನು, ಚತುರನಾದ ಬ್ರಹ್ಮನು ಚಂದ್ರನಲ್ಲಿರುವ ಕಾಂತಿಯನ್ನೂ ಮುತ್ತಿನಲ್ಲಿರುವ ಲಾವಣ್ಯವನ್ನೂ ಪುಷ್ಟದಲ್ಲಿರುವ ನಾಸನೆಯನ್ನೂ ಮಧುರವಾದ ದ್ರಾಕ್ಷಾದಿಗಳಲ್ಲಿರುವ ಮಾಧುರ್ಯವನ್ನೂ ಹೀಗೆಯೇ ಯಾವ ಯಾವ ಸುಂದರವೆನಿಸಿಕೊಂಡ ವಸ್ತುಗಳಲ್ಲಿ ಯಾವ ಯಾವ ಸೌಂದರ್ಯ ಭಾಗವು ಅತಿಶಯಾಧಾಯಕವೋ ಅವುಗಳೆಲ್ಲವನ್ನೂ ತಂದು ಒಟ್ಟುಗೂಡಿಸಿ ಆ