ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕವಿಕಾರ್ಯ ಪ್ರಶಂಸೆ. مرمر ترمیمہ سہ مریمه - - - در هم می برد پیہم . مر مر مرر مسمر در مری بی سیمررسره MMore » ಮತ್ತೊಂದು ಕಡೆ ಮುಖ ತಿರಿಗಿಕೊ೦ಡು ಶಕುಂತಲೆಯು ಮಾಧವೀಲತೆಗೆ ನೀರು ಹೊಯ್ಯುವುದು ತೋರುವುದು, ನೀರು ಹೊಯಿದ ಕೂಡಲೆ ಪುಷ್ಪಗುಚ್ಚ ದಲ್ಲಿ ಮುತ್ತಿಕೊಂಡು ಮಧುಫಾನ ಮಾಡುತ್ತಿರುವ ಮಧುಪಗಳು ಜೊಯ್ಕೆಂದು ಮೇಲಕ್ಕೆ ಎದ್ದು ಅವಳ ಮುಖವನ್ನು ಮುತ್ತಿಕೊಳ್ಳು ವುದೂ, ಅವುಗಳ ಬಾಧೆಗೆ ಅವಳು ಪಡುವ ಕಷ್ಟವೂ ಒ೦ದರ ಮೇಲೊಂದು ಗೋಚರಿಸುವುವು. ಆಗ ಅವಳ ಶರೀರದ ಚಲನೆಯ, ದೃಷ್ಟಿ ವ್ಯಾಪಾರವೂ, ನಾಕ್ಷಾತ್ಕರಿಸಲ್ಪಡುವುವು. ಇಷ್ಟು ಮನೋಹರ ವ್ಯಾಪಾರವನ್ನು ಚಿತ್ರಿಕನು, ಶಿಲ್ಪಕನು, ಛಾಯಾಗ್ರಾಹಿಯು, ಸಿನಿ ಮಿಟೋಗ್ರಾಫನು, ದುಷ್ಯಂತನೊಡನೆ ನಿಂತು ನೋಡುವುದಾಗಿದ್ದರೆ ಒಂದು ವೇಳೆ ತೋರಿಸಬಹುದಾಗಿದ್ದಿತು, ಅ೦ಥ ನೋಟವು ಅವರಿಗೆ ಎಂದೂ ಲಭಿಸತಕ್ಕುದಲ್ಲ. ಕವಿಯು ತನ್ನ ಮನಸ್ಸಿನಿಂದಲೇ ನಿರ್ಮಿಸಿದ ನೋಟವಲ್ಲವೆ ? ಅದೂ ಇರಲಿ; ಆ ನೋಟದೊಡನೆ ದುಷ್ಯಂತನ ಮನಸ್ಸಿನಲ್ಲಿ ಹುಟ್ಟಿದ ಅಸೂಯೆಯೊಡನೆ ಕೂಡಿದ ಅಭಿಲಾಷೆಯು ಯಾರಿಂದ ನಿರೂಪಿಸಲಾದೀತು ? ಜಗತ್ಕೃಷ್ಟವಾದ ಚತುರ್ಮುಖ ನಿಗೇನೇ ಅಸಾಧ್ಯವೆಂದು ಹೇಳುವಾಗ ಕವಿಯಲ್ಲದ ಮತ್ತೆ ಯಾರು ಆ ಆ ಶಯವನ್ನು ನಿರೂಪಿಸಬಲ್ಲರು? ಓ ಭ್ರಮರವೇ, ನೀನೇ ಧನ್ಯನು, ನಾನು ನಿನ್ನ ಅನುಭವವನ್ನು ಅನುಭವಿಸುವಷ್ಟು ಪುಣ್ಯ ಮಾಡಲಿಲ್ಲವಲ್ಲಾ ! ಸುಮ್ಮನೇ ನಾನು ಆಶೆಯಿಂದ ಇಲ್ಲಿ ಒದರಿಕೊಳ್ಳುವದಾಯ್ತು ! ನಾನು ನೋಡುತ್ತಿದ್ದ ಹಾಗೆಯೇ ನೀನು ಅವಳ ಅಧರವನ್ನು ಪಾನ ಮಾಡುತ್ತೀಯಲ್ಲಾ ! ) ಎಂಬ ದುಷ್ಯಂತನ ಮನೋಭಾವವು ಹೊಳೆಯಲಿಲ್ಲವೆ ? ಈ ಅನುಭವವನ್ನು ದುಷ್ಯಂತನು ಮಾತ್ರವೇ ಅನುಭವಿಸಲಿಲ್ಲ ಪಾಠಕರಾದ ನೀವೂ ನಾನೂ ಎಲ್ಲರೂ ಅನುಭವಿಸುವರು, ಮೂರನೆಯ ಪದ್ಯದಲ್ಲಿ ಒಂದೊಂದು ವಿಶೇಷ್ಯದಲ್ಲಿ ಎಷ್ಟು ಹೃದಯಂಗಮವಾದ ಅಭಿಪ್ರಾಯವು ಅಡಗಿರು ವುದೋ ನಾನು ಹೇಳಲಾರೆನು. “ ಮುಹು: ಅಂಗುಳಿಸಂವೃತಾಧರೋಷ್ಟಂ ?” (“ ಪ್ರತಿಷೇಧಾಕ್ಷರ ವಿಕ್ಷವಾಭಿರಾಮಂ ” “ ಮುಖಮಂಸವಿವರ್ತಿ ” ಪಕ್ಷ ೮ಕ್ಷಾಃ ” ( ಕಥಮಪಿ ” “ ಉನ್ನ ಮಿತಂ ” “ ನಚುಂಬಿತಂ” ಈ ವಿಶೇಷಣಗ ಳಲ್ಲಿ ಅಡಗಿರುವ ಅಭಿಪ್ರಾಯ ಪ್ರಪಂಚವನ್ನು ಮಾತು ತಿಳಿಸಲಾರದು, ಮನಸ್ಸೇ ತಿಳಿಸಬೇಕು, ಒಂದೊಂದು ವಿಶೇಷಣದ ಸ್ವಾರಸ್ಯವನ್ನು ನಿಧಾನವಾಗಿ ಯೋಚಿಸಿ ದಲ್ಲಿ ಅನುಭಾವಗಳ ಒಂದು ಪ್ರಪಂಚವೇ ಉಂಟಾಗುವುದು, ಅವನ್ನು ಎಷ್ಟೆಷ್ಟು ಯೋಚಿಸಿದರೂ ವರ್ಣಿಸಿದರೂ ಸಾಲದು.