ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಕವಿಕಾರ್ಯಪ್ರಶಂಸೆ. ಒ ವವರೂ ಇಲ್ಲ; ಕೇಳುವವರೂ ಇಲ್ಲ; ಕವಿಗಳು ತಮ್ಮ ಕಾವ್ಯದಲ್ಲಿ ವರ್ಣಿಸಿದ ಒಂದು ಹಳೇಕಾಲದ ಗುಡಿಸಲೂ, ಒಬ್ಬ ಕುರುಬನ ಇಲ್ಲವೆ ಒಬ್ಬ ಗೊಲ್ಲನ ಕಥೆಯ ಈಗಲೂ ಜನಗಳಿಂದ ಭಕ್ತಿಯಿಂದಲೂ ಗೌರವದಿಂದಲೂ ಆದರಿಸಲ್ಪಡುವುದೆಂದು ಹೇಳಿದ ಮೇಲೆ. ನುತಪೂರ್ವ ರಾಜಕೀರ್ತಿ 1 ಪ್ರತಿಬಿಂಬಂ ಶಬ್ದ ಮುಕುರದೊಳ್ | ಕ್ಷಿತಿಪಾಲರಳಿದೊಡೇಂ ಕಿಡ | ದತಿಶಯದಿಂ ಕೀರ್ತಿಬಿಂಬಮಾಕಾಂತಂ || ಎಂದು ಕವಿಗಳ ವಿಷಯದಲ್ಲಿ ಹೇಳುವುದೊಂದತಿಶಯವಲ್ಲ. ಕ್ಷಣಿಕವಾ ದದ್ದನ್ನು ಚಿರಸ್ಥಾಯಿಯನ್ನಾಗಿಯೂ, ಕ್ಷುದ್ರವಾದದ್ದನ್ನು ಅತಿಶಯವಾದದ್ದನಾ ಗಿಯ, ಮತ್ತೇನು ? ಎಂಥೆಂಥದ್ದನ್ನು ಎಂಥೆಂಥದ್ದ ನಾಗಿಯೂ ಮಾಡುವ ಅನ್ಯಾ ದೃಶವಾದ ಮಹಿಮೆಯು ಕವಿಗಳಿಗಲ್ಲದೆ ಮತ್ತಾರಿಗುಂಟು ? ಇದೂ ಹಾಗಿರಲಿ; ಶ್ರೀಕೃಷ್ಣನು ಅರ್ಜುನನಿಗೆ ದಿವ್ಯ ಚಕ್ಷುಸ್ಸನ್ನು ಕೊಟ್ಟು ವಿಶ್ವರೂಪವನ್ನು ತೋರಿಸಿದಂತೆ ಕವಿಗಳು ತಮ್ಮನ್ನು ಆಶ್ರಯಿಸಿದವರಿಗೆ ಒಂದು ಮಾನಸ ಚಕ್ಷುಸ್ಸನ್ನು ಕೊಟ್ಟು ವಿಶ್ವದ ಮಹಿಮೆಯನ್ನು ತೋರಿಸುವರು, ಅದರ ದರ್ಶನವನ್ನು ಮಾಡಿ ದು:ಖ ಮಿಶ್ರವಿಲ್ಲದ ಆನಂದವನ್ನು ಅನುಭವಿಸುವರು, ಆ ಆನಂದಾನುಭವದಲ್ಲಿ ತಮ್ಮ ದು:ಖವನ್ನೂ ಮರೆಯುವರು. ಸೆರೆಮನೆಯ ಕೋಶ ವನ್ನೂ ಗ್ರಂಥರಚನೆಯಲ್ಲಿ ಸುಖವೆಂದು ಭಾವಿಸುವುದುಂಟು, ಪತ್ನಿ, ಪುತ್ರ, ತಂದೆ, ಸ್ನೇಹಿತ ಮುಂತಾದವರ ಮರಣದಿಂದ ಸಂಭವಿಸಿದ ದು:ಖವನ್ನು ರಾಮಾಯಣ ಮಹಾಭಾರತಾದಿ ಗ್ರಂಥಗಳ ಪಠನ ಮಾಡುತ್ತ ಸಹಿಸಿಕೊಂಡು ಇದ್ದವರನ್ನೂ ನಾವು ನೋಡುತ್ತೇವೆ, ಕವಿಗಳು ಉಪಕರಿಸುವ ರೀತಿಯು ವಿಜಾತೀಯವಾಗಿರುವುದು, ಅವರು ತಾವು ಉಪಕಾರ ಮಾಡುವವರೆಂದು ಉಪಕರಿಸುವ ವೇಳೆಯಲ್ಲಿ ತೋರಿಸಿಕೊಳ್ಳು ವುದಿಲ್ಲ, “ಸ್ವಾರ್ಥಾಸ್ಪರಿತ್ಯಜ್ಯ ಪದಾರ್ಥಘಟಕರು ” ಲೋಕದಲ್ಲನೇಕರಿರುವರು. ಅವರೂ ತಮ್ಮ ಪುರುಷಕಾರವನ್ನು ಆ ಕಾಲದಲ್ಲಿ ತೋರಿಸಿಕೊಳ್ಳದೆ ಇರಲಾರರು. ಕವಿಗಳಾದರೋ ಹ`ಗಲ್ಲ, ಅವರು ವಾಗ್ರಹದಲ್ಲಿ ನಿಂತು ಉಪಕರಿಸುವಾಗ ಉಪಕೃತರಾಗುವ ನಾವು ನಾವೇ ಶ್ರಮಪಟ್ಟು ಆ ಫಲವನ್ನು ಹೊಂದಿದೆವೆಂದು