ಕವಿಕಾರ್ಯಪ್ರಶಂಸ, LF ತಿಳಿಯುವೆವೇ ಹೊರತು ತಮಗಾಗಿ ಕವಿಗಳು ಮಾಡಿದ ಉಪಕಾರವೆಂದು ನೆನೆ ಯೆವು, ದಾರಿಕಾಯುವ ಕಳ್ಳರಂತೆ ಅವರ ಸರ್ವಸ್ವವನ್ನೂ ನಾವು ಅಪಹರಿಸಿ ಕೊಂಡು ಹೋಗುವೆವು, ಅವರು ಅಷ್ಟು ಸಂಪತ್ತನ್ನು ಶೇಖರಿಸಲು ಎಷ್ಟು ಕಷ್ಟ ಪ ಟೈರು? ಎಂಬುದನ್ನು ಸ್ವಲ್ಪವೂ ಗಣಿಸುವುದಿಲ್ಲ. « ನಮ್ಮ ಲಾಭಕ್ಕನೇ ಅವರು ಶೇಖರಿಸಿಟ್ಟ ಸಂಪತ್ತು; ನಾವು ದಾರಿ ಕಾದೆವು; ನಮಗೆ ಆ ಸಂಪತ್ತು ಅಭಿ ಸಿತು” ಏಂದೇ ತಿಳಯುವೆವು ನಾವು ಉಪಕೃತರಾಗುವೆವೆಂಬ ಭಾವನೆಯಿಂದ ಕೂಡಿ ಅವರ ಹತ್ತರ ಉಪಕಾರ ಬೇಡುವುದಕ್ಕೆ ಹೋಗುವಾಗ ಹದಿನಾರು ಹಲ್ಲು ಗಳನ್ನು ಬಿಟ್ಟು ಕೊಂಡು ಮಾರುದ್ದದ ದೇಹವನ್ನು ಚೋಟುದ್ದ ಮಾಡಿಕೊಂಡು ದೈನ್ಯ ದಿಂದ ದೇಹಿ ಎಂದು ಹೇಳಬೇಕಾಗಿಲ್ಲ, ಯಾವಾಗ ದರ್ಶನಲಭಿಸೀತೋ ಎಂದು ಸಮಯ ನಿರೀಕ್ಷಿಸಬೇಕಾಗಿಲ್ಲ. ಉಪಕರಿಸುವರೋ ಇಲ್ಲವೋ ಎಂದು ಸಂಶಯ ಪಡಬೇಕಾಗಿಲ್ಲ, ಅವರಾದರೋ, IC ಉಪಕಾರ ಬೇಡಲು ಯಾರಾದರೂ ಬರುವರುಂಟೇ.? ಯಾರು ಬರುವರು? ಯಾವಾಗ ಬರುವರು? ಎಂದು ನಮ್ಮ ಸಮಯವನ್ನೂ ಅನುಗ್ರಹವನ್ನೂ ಹಾರೈಸುತ್ತಲೂ “ ಯಾವನಾದರೂ ಒಬ್ಬನು ಉಪಕೃತನಾಗಿ ಯೋಗ್ಯನಾದರೆ ತಾವು ಧನ್ಯರು ತಮ್ಮ ಜನ್ಮವು ಸಾರ್ಥಕವಾಯಿತು? ಎಂದು ಸಂತೋಷಪಡುವರು, ಇಂಥ ಸರಳ ಹೃದಯರಾದ ಮಹೋಪಕಾರಿಗ ಇುಂಟೇ? ಇವರ ಉಪಕಾರದ ಸರಳತೆಯನ್ನೂ ನೋಡಿ ಆಬಾಲವೃದ್ದರೂ ಇವರ ಸಹವಾಸವನ್ನು ಸದಾ ಹಾರೈಸುವರು. ಇವರ ಸಹವಾಸವೊಂದೇನೆ ಎಂಥೆಂಥ ಅತಿಶಯವಾದ ಗುಣಗಳನ್ನು ಹುಟ್ಟಿಸುವುದಿಲ್ಲ ? ಕುರೂಪಿಯಾಗಿದ್ದರೂ ಇವರ ಸಹ ವಾಸ ಮಾಡಿದವನು ರೂಪವಂತನಿಗಿಂತಲೂ ಅತ್ಯಧಿಕವಾಗಿ ಜನರಿಂದ ನೋಡಲ್ಪ ಡುವನು, ದುರ್ಗುಣಿಯಾದವನು ತನ್ನ ದುರ್ಗುಣಗಳನ್ನು ಕಷ್ಟಪಡದೆ ಸರಾಗವಾಗಿ ಕಳೆದುಕೊಳ್ಳುವನು. 4 ವಿದ್ಯಾವಿಹೀನಃ ಪಶುಃ ” ಎಂಬ ಮರ್ಯಾದೆಯಲ್ಲಿ ತನ್ನ ಲ್ಲಿದ್ದ ಪಶುತ್ವವನ್ನು ಹೋಗಲಾಡಿಸಿಕೊಂಡು ದೇವಭಾವವನ್ನು ಹೊಂದಲು ಯತ್ನಿ ಸುವನು. ಹಾಗೆ ಯತ್ನಿ ಸಿ ದೇವನೇ ಆಗುವನು, ಸುಗುಣಾದಿಗಳು ಹುಟ್ಟಿದ ಮೇಲೆ ಯೇ ಕವಿಗಳ ಉಪಕಾರವು ಅತಿಶಯ ಉಳ್ಳದ್ದೆಂದು ಉಪಕೃತರಾದವರಲ್ಲಿ ಕೃತಜ್ಞ ತಾಜ್ಞಾನವು ಜನಿಸುವುದು, ಕವಿಗಳು ಇಂದ್ರಜಾಲ ವಿದ್ಯೆಯಲ್ಲಿ ಬಹು ಕುಶಲರಾದ ರಿಂದ ಪುಸ್ತಕಗಳೆಂಬ ಇಂದ್ರಜಾಲ ದಂಡವನ್ನು ತಿರುಗಿಸಿ ದೃಶ್ಯಗಳಾದ ಲೋಕವೆ ಸ್ತುಗಳ ವಿಚಿತ್ರ ವ್ಯಾಪಾರಗಳು ಕಣ್ಣಿನ ಮುಂದೆ ನಡೆಯುವಂತೆ ತೋರಿಸಿ ಅದನ್ನು ನೋಡುವ ಕಾಲದಲ್ಲಿ ಹರ್ಷವಿಷಾದಗಳನ್ನು ಅನುಭವಿಸುವಂತೆ ಮಾಡಿ ಪ್ರೇಕ್ಷಕ
ಪುಟ:ಕವಿಕಾರ್ಯಪ್ರಶಂಸೆ.djvu/೪೮
ಗೋಚರ