ಕವಿಕಾರ್ಯಪ್ರಶಂಸೆ. P + + ++ * ಆ++: •••••••••..• v2. ನಾವು ನಾವೇ ಇಷ್ಟಪಟ್ಟು ಕೆಲಸ ಮಾಡುವಂತೆ ಮಾಡುವರು, ಕವಿಗಳ ಮಾತು ಕರ್ಕಶವಾಗಿಲ್ಲ. ದ್ರಾಕ್ಷೆಯಂತೆ ರುಚಿಯಾಗಿರುವುದು, ಯಾವ ಯಾವ ಪ್ರಕೃತಿ ಯುಳ್ಳ ಜನರನ್ನು ಹೇಗೆ ವಶಮಾಡಿಕೊಳ್ಳಬೇಕೆಂಬುದನ್ನು ಅವರು ಬಲ್ಲರು, ಔಷಧ ವನ್ನು ಸಕ್ಕರೆಯೊಳಗಿಟ್ಟು ಮಕ್ಕಳಿಗೆ ಕೊಡುವಂತೆ ದುರ್ಗುಣ ನಿವಾರಣೆ ಮಾಡಲು ಔಷಧಿಕೊಡಲು ಬಂದವರೆಂದು ನಾವು ಅವರ ಹತ್ತಿರ ಹೋಗುವಾಗ ಗೊತ್ತಾಗುವು ದಿಲ್ಲ, ಹೇಳಬೇಕೆಂಬ ವಿಷಯವನ್ನು ತಿಳಿಯಿತು, ತಿಳಿಯಲಿಲ್ಲ, ಎಂಬ ರೀತಿಯಲ್ಲಿ ಮರೆಮಾಚಿ ಹೇಳುತ್ತ ಹೇಳುತ್ತ ಹೋಗಿ ತಿಳಿದುಕೊಂಡಲ್ಲದೆ ಆಗದೆಂಬ ಉತ್ಕಟೀ ಜ್ಞೆ ನಮ್ಮಲ್ಲಿ ಕಾಣುತ್ತಲೆ ತಿಳಿಸುವರು, ತಾವು ತಿಳಿಸುವ ವಿಷಯದಲ್ಲಿ ಪಾಠಕರು ಗಳಿಗೆ ಅನುಭಾವಾದಿಗಳನ್ನು ಹುಟ್ಟಿಸಿ ಅವರ ಅಂತರಂಗದಲ್ಲಿ ತಮ್ಮ ಉದ್ದೇಶವು ದೃಢಮೂಲವಾಗಿ ಫಲಕಾರಿಯಾಗುವಂತೆ ಮಾಡುವರು, ಒಳ್ಳೆಯ ಮಾತಿಗೆ ವಶವಾಗ ದವನು ಆಜ್ಞೆಗೆ ವಶವಾಗುವನು, ಆಜ್ಞೆಗೆ ವಶವಾಗದವನು ಹೆದರಿಕೆಗೆ ವಶವಾಗುವನು. ಇವಿಷ್ಟ ಕ್ಕೂ ವಶವಾಗದವನು ಇಷ್ಟವಾಗಿರುವುದನ್ನು ಕೊಡುವುದರಿಂದ ವಶವಾಗು ವನು. ಈ ನೀತಿಯನ್ನು ಚನ್ನಾಗಿ ಬಲ್ಲ ಕವಿಗಳು ಸಮಯಕ್ಕೆ ತಕ್ಕಂತೆ ಬೋಧಿಸಿ ಮಾಡಿ, ಕೊಟ್ಟು ತಮ್ಮ ಮಾರ್ಗಕ್ಕೆ ತಂದುಕೊಳ್ಳುವರು, “ ಸತ್ಯಂ ವದ, ಧರ್ಮಂ ಚರ ” ಎನ್ನುವ ಹಾಗೆ ಶಾಸ್ತ್ರಕಾರರ ಶಾಸನವಿರುವುದು. “ ಅಸತ್ಯಕ್ಕೆ ಒಳಗಾದರೆ, ಅಧರ್ಮದಲ್ಲಿ ಚರಿಸಿದರೆ ಸೆರೆಯಲ್ಲಿಡುವೆನು; ಶೂಲವನ್ನು ಏರಿಸು ವೆನ್ನು, ” ಎಂಬಂತೆ ರಾಜಾಜ್ಞೆಯು ಇರುವದು, ಕವಿಗಳು ಜನಗಳನ್ನು, ಧರ್ಮ ಮಾರ್ಗದಲ್ಲಿ ನಡೆಯಿಸಬೇಕೆಂಬ ಉದ್ದೇಶದಲ್ಲಿಯೇ ಹೊರಟರೂ ಅವರ ಶಿಕ್ಷಾಕ್ರಮದಲ್ಲಿ “ ನಮ್ಮನ್ನು ಇವರು ಶಿಕ್ಷಿಸುವುದಕ್ಕೆ ಬಂದಿರುವರು; ನಮ್ಮ ಸೈರಾ ಚಾರವನ್ನು ನಿರೋಧಿಸುವರು, ೨” ಎಂಬ ಭಾವವೇ ಹುಟ್ಟುವುದಿಲ್ಲ. ಸಂತೋಷದೊ ಡನೆ ಇವರ ಹಿಂದೆ ಹೋಗಿ ಸಂಸ್ಕೃತರಾಗಲು ಸಮ್ಮತಿಸುವೆವು, ಇಷ್ಟವಿದ್ದ ಕಡೆ ಕಾರ್ಯವು ಕಷ್ಟವಿಲ್ಲದೆ ನೆರವೇರುವುದಾದ್ದರಿಂದ ಕವಿಗಳ ಪ್ರವೃತ್ತಿಯು ಹಿಂದೆ ನಿರೂಪಿಸಿದಂತೆ ಅವರ ವಾಕ್ಯವನ್ನು ಕೇಳುವವರಲ್ಲಿ ನಾವು ಎಂಬ ಭಾವವೇ ಮಾಯ ವಾಗುವುದರಿಂದ ಎಂದೂ ನಿಷ್ಪಲವಾಗುವುದಿಲ್ಲ. ಕವಿಗಳ ಕಾರ್ಯ ಸಾಧನಾ ಕ್ರಮವು ಅಷ್ಟು ಮನೋಹರವಾದುದು ! ಕವಿಗಳ ಶಕ್ತಿಯನ್ನು ಸ್ವಲ್ಪ ಯೋಚಿಸಿ ಕೋಡಿರಿ. ರಾಜನೇ ಮೊದಲಾದ ಲೋಕಹಿತೈಷಿಗಳು ಎಷ್ಟು ಶ್ರಮ ತೆಗೆದು ಕೊಂಡರೂ ಕವಿಗಳಂತೆ ಹರಿಶ್ಚಂದ್ರನೊಡನೆ ಬಾಲಕರನ್ನು ಬೇಟಿಗೆ ಹೋಗುವಂತೆ ಉತ್ಸಾಹಗೊಳಿಸಬಲ್ಲರೆ? ಆತನ ಪತ್ನಿಪುತ್ರರ ಕಷ್ಟದಲ್ಲಿ ಕೊರಗಿಸಬಲ್ಲರೆ? ಕಾಶೀ. ಪಟ್ಟಣದಲ್ಲಿ ಕೊರಿಯಾದ ಕಾಲಕೌಶಿಕನು ರೋಹಿತಾಶ್ವನನ್ನು ದರದರನೆ ಎಳೆದೊ, ಹರಿಶ್ಚಂದ್ರನನ್ನು ತ್ಯಜಿಸಲಾರದೆ ಸ್ವಲ್ಪ ತಾಮಸಮಾಡಿದ ಚಂದ್ರಮತಿಯನ್ನು ನಡೆ ಯೆಂದು ಗದ್ದರಿಸಿಕೊಂಡಾಗ ಆಕೆಯ ದೈನ್ಯವನ್ನೂ, ರೋಹಿತಾಶ್ವನ ರೋದನವನ್ನೂ
ಪುಟ:ಕವಿಕಾರ್ಯಪ್ರಶಂಸೆ.djvu/೫೧
ಗೋಚರ