ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ಕವಿಕಾರ್ಯಪ್ರಶಂಸೆ.

      • FM/V -YPA,

vvvv. ನೋಡಿಕೊಂಡು ಎದೆಗುಂದದೆ ಇರುವರು ಈಗಲೂ ನಮ್ಮಲ್ಲಿ ಎಷ್ಟು ಮಂದಿ ಇಲ್ಲ? ಭೀಷ್ಮನಂತೆಯ ಅಭಿಮನ್ಯುವಿನಂತೆಯೂ ಇರಬೇಕೆಂಬ ಆಶೆಯು ಎಷ್ಟು ಮಂದಿಗಳನ್ನು ಪ್ರೇರಿಸುತ್ತಿಲ್ಲ? ಮುಸಲ್ಮಾನನಾದ ಹೈದರಲ್ಲಿಯೂ ಕೂಡ ಭಾರತ ಯುದ್ಧವನ್ನು ಕೇಳಿ ( ಏಕ್ ಲೊಕ್ರ, ಏಕ್ ಬುಡ್ಡ,” ಎಂದು ಹೊಗಳಿ ತಲೆದೂ ಗಿದನೆಂದು ಕೇಳಿದ್ದೇವೆ. ಕಂತಿಯಂತೆ ಪುತ್ರರ ಶ್ರೇಯಸ್ಸಿನಲ್ಲಿ ಬುದ್ಧಿಯಿಟ್ಟು ವೈಧವ್ಯದು:ಖವನ್ನು ಸಹಿಸಿಕೊಂಡು ಪ್ರವರ್ತಿಸುವವರು ಎಷ್ಟು ಸ್ತ್ರೀಯರು ಇಲ್ಲ? ಝಾಂಸಿ ಮಹಾರಾಣಿಯ ಚರಿತ್ರವನ್ನು ಕೇಳಿರುವಿರಿ, ಇವೆಲ್ಲವು ಕವಿಗಳು ನಿರೂ ಪಿಸುವ ಮಹಾತ್ಮರ ಚರಿತ್ರೆಗಳ ಶ್ರವಣಪಠನಗಳಿಂದ ಹುಟ್ಟಿದುವಲ್ಲವೆ? ಇಂಥ ಸಾಮರ್ಥವು ಮತ್ತು ಯಾರಲ್ಲಿ ಕಂಡು ಬರುವುದು? ಏವಂಚ ಕವಿಗಳ ಬೋಧನಾಕ್ರಮವು ವಿಜಾತೀಯವಾಗಿರುವುದು, ಬಾಲ ಕರ ಮನಸ್ಸೆಂಬ ನೆಲವನ್ನು ಗಮನವೆಂಬ ನೇಗಿಲಿನಿಂದ ಬಹುಕಾಲ ಅಗೆದು ಅಗೆದು ಅಗತೆಮಾಡಿ ಅಲಸ್ಯ, ಗ್ಲಾನಿ, ಜುಗುಪ್ಪೆಗಳೆಂಬ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ನವರಸಗಳೆಂಬ ನೀರಿನಿಂದ ಸೇಚನೆಮಾಡಿ, ಲೋಕಸ್ಥಿತಿ ನಿರೂಪಣವೆಂಬ ಗೊಬ್ಬರವನ್ನು ಮೇಲೆ ಎರಚಿ, ಮಾತಿನ ಸೊಗಸೆಂಬ ಸಲಾಕ ಗಳಿಂದ ಚೆನ್ನಾಗಿ ಆಗಾಗ್ಗೆ ಕೆದರಿ, ಸಚ್ಚಿಲೀಪ್ರವರ್ತನವೆಂಬ ಬೀಜವನ್ನು ಮಹಾತ್ಮರ ಚರಿತ್ರವೆಂಬ ಆಧಾರದಲ್ಲಿ ತಂದು ನೆಟ್ಟು, ಆ ಬೀಜವು ಮೊಳಕೆ ಬಿಟ್ಟು ಸಸಿಯಾಗಿ ಸೊಂಪಾಗಿ ಬೆಳೆಯುವವುದಕ್ಕೋಸ್ಕರ * ಆಹಾ! ಇದು ನಮ್ಮ ಅನುಭವವೇ ಆಗಿರುವುದು, ನಮ್ಮಂತೆಯೇ ಇತರರೂ ಅನುಭವಿಸುವರು, ಈ ಅನುಭವವೇ ನಿಜವಾದದ್ದು ' ಎಂಬ ವಿಶ್ವಾಸ ಆದರಗಳೆಂಬ ಗಾಳಿಬಿಸಿಲುಗಳು ಬೀಳುವ ಅವಕಾಶವನ್ನು ಹುಟ್ಟಿಸಿ, ಅದು ಬೆಳೆದು ಜೀವಮಾನದ ಆದಿಭಾಗವೆಂಬ ಬಾಲ್ಯದಲ್ಲಿ ಚನ್ನಾಗಿ ಬೇರೂರಿ ದೃಢವಾಗಿ ನಿಲ್ಲುವಂತೆಯ, ಮುಂದೆ ಜೀವಮಾನ ದ ಮಧ್ಯ ಮತ್ತು ಅಂತ್ಯಭಾಗಗಳಲ್ಲಿ ವೃಕ್ಷವಾಗಿ ಬೆಳೆದು ಸಮೃದ್ಧಿಯಾಗಿ ಸ್ವಾದು ಫಲ ಬಿಡುವಂತೆಯೂ ಮಾಡುವ ಚಾತುರ್ಯವುಳ್ಳ ಒಂದು ಬಗೆಯ ತೋಟಗಾರ ರೇ ಕವಿಗಳು, ಹೀಗೆಂದ ಮೇಲೆ ಕವಿಗಳ ಕಾರ್ಯವು ವಿಫಲವಾಗುವದೂ ಉಂಟೋ ? ಕವಿಗಳ ಬೋಧನಾ ಪ್ರಕಾರಕ್ಕೂ ನೀತಿಕಾರರೇ ಮೊದಲಾದ ಇತರ ಮಹೋಪಕಾರಿಗಳ ಪ್ರವೃತ್ತಿಗೊ ತಾರತಮ್ಯವನ್ನು ನೀವೇ ಯೋಚಿಸಿ, ಕವಿಯೆಂಬ ಗರುಡನ ಮುಂದೆ ಹಿತೈಷಿಗಳೆಂಬ ಗುಬ್ಬಿಗಳು ಅಡುವುವೆ?