ವಿಷಯಕ್ಕೆ ಹೋಗು

ಪುಟ:ಕವಿಕಾರ್ಯಪ್ರಶಂಸೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕಾರ್ಯಪ್ರಶಂಸೆ. ಕೇಳಿ ಹರಿಶ್ಚಂದ್ರನ ಎದೆಯು ಹೇಗೆ ತಲ್ಲಣಿಸಿ ಹೋಯಿತೋ ಹಾಗೆ ಬಾಲಕರ ವಿದೆ ಯನ್ನು ತಲ್ಲಣಿಸಬಲ್ಲರೆ?' (C ವಿಶ್ವಾಮಿತ್ರನು ಏನೇನು ಕಷ್ಟಗಳನ್ನು ಕೊಡುವನೋ ನೋಡುವೆನು; ಸತ್ಯವನ್ನೂ ಧರ್ಮವನ್ನೂ ಕಾಪಾಡಲಾರದೆ ಹೋದೇನೇ?” ಎಂಬ ಹರಿಶ್ಚಂದ್ರನ ಕೆಚ್ಚನ್ನು ಬಾಲಕರಲ್ಲಿ ಹುಟ್ಟಿಸಬಲ್ಲರೆ? ಕೊನೆಗೆ ಚಂದ್ರಮತಿಯು ಸತ್ತ ಮಗನನ್ನು ಮಸಣಗಾಡಿನಲ್ಲಿ ಹಾಕಿಕೊಂಡು ಭೂತಗಳಿಗೂ ಕೂಡ ಎದೆ ಕರಗು ವಂತೆ ರೋದನ ಮಾಡುತ್ತ ಕಣ್ಣೀರನ್ನು ಧಾರೆಧಾರೆಯಾಗಿ ಸುರಿಸುತ್ತ ತನ್ನ ಪೂರ್ವ ಸ್ಥಿತಿಯನ್ನು ನೆನೆಸಿಕೊಂಡು ಹಂಬಲಿಸುತ್ತಾ “ ಮಸಣದ ಕಾವಲವನು ನೆಲಹಾಗವನ್ನು ಕೇಳಿದರೆ ಎಲ್ಲಿಂದ ಕೊಡಲಿ, ಯಾರಲ್ಲಿ ಬೇಡಲಿ, ಅಯ್ಯೋ ಹರಿ ಶ್ಚಂದ್ರನೇ ?” ಎಂದು ಪಳಾಪಿಸುತ್ತಿರುವುದನ್ನು ಕೇಳಿ ಹರಿಶ್ಚಂದ್ರನು ಅವಳಿಂದ ನೆಲಹಾಗವನ್ನು ತೆಗೆದುಕೊಂಡು ತನ್ನ ಕರ್ತವ್ಯವನ್ನು ಕಾಪಾಡುವನೋ ಇಲ್ಲವೆ ವಿಶ್ವಾಮಿತ್ರನ ಮಾಯೆಗೆ ಸಿಕ್ಕಿ ತನ್ನ ಸತ್ವಯನ್ನು ಕಳೆದುಕೊಳ್ಳುವನೋ? ಮತ್ತು ಪತ್ನಿಯನ್ನೂ ಪುತ್ರನನ್ನೂ ಗುರುತಿಸಿದ ಮೇಲೆ ಅವನ ಎದೆಯು ಸೀಳಿ ಹೋಗದೋ ಎಂಬ ನಿರೀಕ್ಷಣೆಯಲ್ಲಿ ಶೋತೃ ಬಾಲಕರ ಮನಸ್ಸು ವಿಸ್ಮಯ ಸ್ತಬ್ದವಾಗುವಂತೆ ಮಾಡ ಲಾಪರೆ? ತನಗೊದಗಿದ ಅಪಾಯಗಳನ್ನು ಧೈರ್ಯ ಸೈರ್ಯಗಳಿಂದ ಜಯಿಸಿ ಪತ್ನಿ ಪತ್ರಾದಿಗಳೊಡನೆ ಸೇರಿದಾಗ ಹರಿಶ್ಚಂದ್ರನಲ್ಲಿ ಜನಿಸಿದ ಆನಂದವನ್ನು ಪ್ರೋತೃಬಾ ಲಕರಲ್ಲಿ ಆತನಿಗಿಂತ ಹತ್ತು ಪಾಲು ಹೆಚ್ಚಾಗಿ ಹುಟ್ಟಿಸಿ ಆನಂದ ಪಾರವಶ್ಯದಿಂದ ಕುಣಿ ಯಿಸ ಬಲ್ಲರೆ? ಇಷ್ಟರ ಮೇಲೆ (ಹರಿಶ್ಚಂದ್ರನು ಎಂಥ ಮಹಿಮನು, ಅವನಂತೆ ಹಸ್ತ ಪಾದಗಳುಳ್ಳ ನಾವು ಏಕೆ ಅವನಂತೆ ಆಗಬಾರದು ? ಯತ್ನಿಸಿದರೆ ಆಗದೆ ಏನು? ವಿಶ್ವಾಮಿತ್ರನೂ ಮಹಾತ್ಮನು, ಯೋಗ್ಯನು, ಯೋಚಿಸಿದರೆ ವಸಿಷನಿಗಿಂತಲೂ ಅಧಿಕಮಾನಾರ್ಹನು, ಹರಿಶ್ಚಂದ್ರನಿಗೆ ಅಧಿಕಾಪ್ತನು, ವಿಶ್ವಾಮಿತ್ರನು ಅಷ್ಟು ಕಷ್ಟ ಗಳನ್ನು ಕೊಡದಿದ್ದರೆ ಹರಿಶ್ಚಂದ್ರನ ಯೋಗ್ಯತೆಯು ಹೊರಬೀಳುತ್ತಿತ್ತೆ? ಅಂಥೆ ಅತ್ಯುಚ್ಛಾಯದ ಶ್ರೇಯನ್ನೂ ಲಭಿಸುತ್ತಿತ್ತೇ ? ರಾಜಭೋಗಕ್ಕಿಂತ ಬಹುಭಾಗ ದಲ್ಲಿ ಮೇಲಾದ ತಪೋಭೋಗವನ್ನು ವಿಶ್ವಾಮಿತ್ರನಲ್ಲದೆ ಬೇರೆ ಯಾವನು ದಾನ ಮಾಡುತ್ತಿದ್ದನು ? ಹರಿಶ್ಚಂದ್ರನಂತೆ ನಾವೂ ಸಚ್ಚಿಲವ್ರತವನ್ನು ಕೈಕೊಳ್ಳೋಣ; ನಮ್ಮ ವ್ರತಕ್ಕೆ ಭಂಗಸಂಭವಿಸಿದರೆ ಮಹಾತ್ಮರ ಸಹಾಯದಿಂದ ಏಕಪಾರಾಗಬಾ ರದು ? ಒಂದುವೇಳೆ ನಮ್ಮ ವ್ರತವೂ ಭಗ್ನ ವಾದರೂ ನಮ್ಮ ಸ್ಥಿತಿಯು ಉತ್ತಮೋತ್ರ ಮವಾಗುವುದರಲ್ಲಿ ಸಂಶಯವಿಲ್ಲ. ” ಎಂದು ಧೈರ್ಯದಿಂದೊಡಗೂಡಿದ ಸದ್ದ ರ್ಮಪವರ್ತನೆಯೂ ಶೋತೃಬಾಲಕರಲ್ಲಿ ಹುಟ್ಟಲು ಅಡಿ ಯೇನು ? ಈಗಲೂ ನಮ್ಮಲ್ಲಿ ಅನೇಕ ಸ್ತ್ರೀಯರು ಜಾನಕಿಯ ಚರಿತ್ರೆಯನ್ನು ಕೇಳಿ ಸಂಸಾರದ ಕಷ್ಟವನ್ನು ಸಹಿಸಿಕೊಂಡಿಲ್ಲವೆ ? ಪುತ್ರಮಿತ್ರ ಕಳತಾದಿಗಳ ವಿಯೋಗದಲ್ಲಿಯ ಬಡತನದ ಕೋಟಲೆಯಲ್ಲಿಯೂ ಕವಿಗಳು ತಿಳಿಸಿದ ಹಿಂದಣ ಮಹಾತ್ಮರನ್ನು