ಪುಟ:ಕವಿಯ ಸೋಲು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕವಿಯ ಸೋಲು

ಹೊಂಚುತಿರೆ, ಕೂಗುವೆವು ಕಾಹಿನವರಂದದಲಿ
ಎಚ್ಚರದಿ ತಿರುಗುವೆವು; ಅಪಶಕುನವಾಯ್ತೆಂದು
ಹೆದರಿಯೋಡುವರವರು. ಉಪಕಾರವಿಷ್ಟಿರಲು
ಸುಟ್ಟ ಮಾನವ ಜಾತಿ ಉಪಕಾರವೆಣಿಸುವುದೆ!

ಕವಿ ರಾ.-ಮುಂಗಾರ ಮೊದಲ ಮಳೆ ಜಿರೆಂದು ಸುರಿವಂತೆ

ಆಲಿಕಲ್ಗಳ ಮಳೆಯು ರಪರಪನೆ ಹೊಡೆವಂತೆ
ಎಡೆಬಿಡದೆ ನೀಯೆನ್ನ ತಲೆಮೇಲೆ ಮಾತುಮಳೆ
ಹೊಡೆಯುತ್ತಿವೆ. ಎನ್ನ ದೊರೆ! ಶಾಂತಿಯ೦ ತಾಳಯ್ಯ,
ನಾನೆರಡು ಮುತ್ತುಗಳನಾಡುವೆನು ಕೇಳಯ್ಯ.

ಘೂ, ರಾ - ಮುತ್ತುಗಳೆ! ಭಾಪುರೇ! ಕವಿರಾಜ!

ಕವಿ ರಾ- ಎನ್ನ ದೊರೆ!

ನಿನ್ನ ನುಡಿ ಹಿರಿಯ ನುಡಿ ಫಲಿಸುವುದು. ಎನ್ನ ನುಡಿ
ಚಿತ್ತವಿಸು, ನಿಮಗೆ ನಾನಪಕಾರ ಮಾಡಿದೆನೆ?
ನಿಮಗಲಂಕಾರಮಂ ನಮಗಲಂಕಾರಮಂ
ನಲ್ಮೆಯಿಂದಾಡಿದೆನು; ಹಳಿವೆಣಿಕೆ ಎನಗಿಲ್ಲ
ಮೆಚ್ಚುನುಡಿಯಾಡಿದೆನು; ನಿಮ್ಮ ಉಪಕೃತಿ ಹಿರಿದು
ನಿಮ್ಮ ದೆಸೆಯಿಂದೆಮಗೆ ಉಪಮಾನ ದೊರೆಯಿತ್ತು,

ಘೂ, ರಾ.- ಉಪಮಾನ ನಿಮಗಾಯು, ಅಪಮಾನ ನಮಗಾಯ್ತು

ಆಡಿ ಫಲವೇನಯ್ಯ ಬಣ್ಣನೆಯ ಕೊಂಕು ನುಡಿ;
ರಕ್ತೋಪವನವನ್ನು ಬಿಟ್ಟಿಹೆವು, ಇನ್ನೀಗ
ಈವೂರು, ಈ ದೇಶ ಎಲ್ಲವಂ ಬಿಡಲಿಹೆವು.

ಕವಿ ರಾ.-ಅರಸು ಮುನಿದರೆ ತಿಳುಹುವುದು ಕಷ್ಟ, ಹೇಳೆನ್ನ

ದೊರೆಯೆ! ನೀನಿಂತು ಮುನಿದರೆ ನಾನು ಬದುಕುವೆನೆ?
ಒಲುಮೆಯಿಂ ಎರಡು ನುಡಿ ಕೇಳಯ್ಯ ತಪ್ಪಾಯ್ತು.

೯೧