ಪುಟ:ಕವಿಯ ಸೋಲು.pdf/೧೦೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಏಯ ಸೋಲು ಕವಿ ಲಾ- ಕಾಲ್ವಿಡಿದು ಬೇಡುತಿಹೆ. ಮುನಿಸಿನ್ನು ಬೇಡಯ್ಯ, ಕಾಲ್ವಿಡಿದು ಬೇಡಿರುವ ವಿಷಯವಂ ಜಗಕೆಲ್ಲ ತಿಳಿವಂತೆ ಮುದ್ರಿಪೆನು ; ಓದುವವರಾರುಂಟು ಅವರ ಕೈಯಲ್ಲಿ ಕೊಟ್ಟು ಎಲ್ಲರಿಗೆ ತಿಳಿಸುವೆನು ; ಬೀದಿ ಬೀದಿಯ ಹೊಕ್ಕು ಡಂಗುರವ ಹಾಕುವೆನು ; ಪತ್ರಿಕೆಗಳೆನಿತುಂಟೋ-ದಿನ ದಿನದ ಪತ್ರಿಕೆಯು ವಾರ ವಾರದ ಪತ್ರಿಕೆಯು, ಮಾಸಪತ್ರಿಕೆಯು ಅದಕೆಲ್ಲ ಕಳುಹುವೆನು ; ಮೂರು ತಿಂಗಳಿಗೊಮ್ಮೆ ತಡೆತಡೆದು ಮರು ವರ್ಷಕ್ಕೊಮ್ಮೆ ಬರುತ್ತಿರುವ ಪತ್ರಿಕೆಗಳಾದೊಡಂ ಹುಡು) ಹುಡುಕಿ ಕಳುಹುವೆನು. ಎಲ್ಲರುಂ ಹೊಗಳುವರು ಎನ್ನ ದೊರೆ ! ನಿನಗೇನು ನಾಡಲ್ಲಿ ಹೊಗಳಿಕೆಯೆ ತುಂಬಿಹುದು, ಹೇಳಲೇಂ ಕೇಳಲೇಂ! ಮುಗಿಲನ್ನು ಮುಟ್ಟಿಸುವ ಹೊಗಳಿಕೆಯು ಸಗ್ಗಕ್ಕೆ ಏರಿಸುವ ಹೊಗಳಿಕೆಯು, ತಾರೆಗಳ ಸೂಡಿಸುವ ಚಂದ್ರನಂ ಚುಂಬಿಸುವ ಹೊಗಳಿಕೆಯು ಮೇರುಮಂದರಗಳಿಗೆ ತೂಗು ಉಯ್ಯಲೆ ಕಟ್ಟಿ ತೂಗುವಾ ಹೊಗಳಿಕೆಯು, ಎನ್ನ ದೊರೆ ! ಈಯೆನ್ನ ನಾಡಿನಲಿ ನಿನ್ನ ಹೊಗಳದರುಂಟೆ ? ಏನಿಲ್ಲ ಮೆಂದೊಡಂ ಚಾಮುಂಡಿಗೇರಿಸಲಿ, ಶಿವಗಂಗೆ ಸಾಕೇಳು, ಅವರಾರು ಹೊಗಳದಿರ್ದೊಡೆಯೇನು ? ಏನು ಗತಿ? ಎನ್ನದಿರು, ಬೇರೊಂದು ಹೆಸರಿನಲ್ಲಿ ನಾ ಹೊಗಳಿ ಕೈಲಾಸಕೇರಿಸುವೆ, ಅಲ್ಲದೊಡೆ ವೈಕುಂಠಕೇರಿಸುವೆ, ಸಂಕೋಚ ಬೇಡಯ್ಯ. ನೀನೊಮ್ಮೆ ಮಂದಹಾಸವ ಸೂಸಿ ಎನ್ನ ಗೃಹ