ವಿಷಯಕ್ಕೆ ಹೋಗು

ಪುಟ:ಕವಿಯ ಸೋಲು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕವಿಯ ಸೋಲು

ಬೆಳಗಯ್ಯ, ನಿನ್ನ ಮನದಣಿವಂತೆ ಬಣ್ಣಿಸಲೆ?
(ಘೂಕರಾಜನು ಎಳನಗೆಯನ್ನು ಮಿತವಾಗಿ ನಗುವನು.)

ಸಪ್ತಪಾತಾಳದಲಿ ಕಗ್ಗವಿಯ ಮೂಲೆಯಲಿ
ಮಿನುಗುವಾ ನೀಲಮಣಿಗಳೊ ಕಣ್ಣ ಪಾಪೆಗಳೊ
ಪಾತಾಳ ಗೃಹದ ಮುಂಬಾಗಿಲಲಿ ಸಿಂದಿರುವ
ಎಷ್ಟು ಚಕ್ರಗಳೊ ನೇತ್ರ ಪರಿವೇಷ ಶೋಭೆಗಳೊ-

ಘೂ, ರಾ.- ಸಾಕಯ್ಯ ವರ್ಣನೆಯು, ತಪ್ಪನ್ನು ಒಪ್ಪಿರುವೆ,
ಮೆಚ್ಚಿದೆನು. ಊರಿನಲ್ಲಿ ದೇಶದಲ್ಲಿ ನಾವಿದ್ದು
ಕಳೆಯನ್ನು ಕಟ್ಟುವೆವು ; ಮುನಿಸನ್ನು ಬಿಟ್ಟಿಹೆವು.
ಆದರೀ ನುಡಿಯೊಂದು ಹೇಳುವೆನು ಕೇಳಯ್ಯ
ಅವರು ತೊಲಗುವ ತನಕ ರಕೋಪವನವನ್ನು
ಇಟ್ಟಿಣಿಕಿ ನೋಡಲೊಲ್ಲೆವು ನಾವು; ಅವರೆಂದು
ಉಪವನಕೆ ಕಾಲಿಡದೆ ಬೇರೆಡೆಗೆ ಪೋಗುವರೋ
ಅಂದಲ್ಲಿ ಬಂದಾವು ನೆಲಸುವೆವು. ನಿನಗೊಪ್ಪೊ ?

ಕವಿ ರಾ.-ಎನ್ನ ದೊರೆ! ಎನಗೆಪ್ಪ, ಇನ್ನು ಮಾಡುವುದೇನು
ಅವರೆಂದು ತೋಲಗುವರೋ ನಾನರಿಯೆ. ದೇಶದಲ್ಲಿ
ರಮ್ಯ ವಸ್ತುಗಳೆಲ್ಲ ಹೆರರ ಅನುಭವದಲ್ಲಿ
ಸಾಲುಮಳಿಗೆಗಳೆಲ್ಲ ಹೆರರ ಕೈವಶದಲ್ಲಿ
ನಾವೆಲ್ಲ ನಿರ್ಲಿಪ್ತರಾಗಿಹೆವು. ಎನ್ನ ದೊರೆ1
ರಕ್ಕೋಪವನವನ್ನು ನೀವೆಲ್ಲ ಬಿಟ್ಟಿರಲು
ನಾನೇನು ಬಿಟ್ಟರೆನೆ? ಬಿಟ್ಟಿಹೆನು ಬಿಟ್ಟಿಹೆನು,
ಗೊಗೇಶ್ವರಾಲಯಕೆ ದಿನ ದಿನವು ನಾ ಹೋಗಿ
ಶಾಂತಿಯಂ ಪಡೆಯುವೆನು ; ಎನ್ನು ಮಂ ನಾಡುಮರ
ದಯೆಯಿಂದ ಉಳಿಸಿರುವೆ, ನಿನಗೀಗ ಸಾಷ್ಟಾಂಗ

೯೪