ಪುಟ:ಕವಿಯ ಸೋಲು.pdf/೧೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ಈತನ ಕೈಯಲ್ಲಿ ಸಕ್ಕರೆ ಬೆಲ್ಲ;
ಕನ್ನಡ ಬಲ್ಲನು ಕನ್ನಡ ಜಾಣ
ಇವನೇ ಕುಮತ ಧ್ವಂಸಕ ಬಾಣ
ಇಸ್ಲಾಮಿನ ಸಂತಸ ಸುಮಬಾಣ
ಎಂದೆಲ್ಲಾ ಜನ ಬಳಿ ಸೇರಿದರು
ನೆರೆ ಕಿಕ್ಕಿರಿಯುತ ಗುಡಿ ಕಟ್ಟಿದರು
ಬಿಡುಗಣ್ಣಿಂದವನಂ ನೋಡಿದರು
ನಾಲಗೆ ತಣಿವನ್ನಂ ಹೊಗಳಿದರು.

ಕಣ್ಣದು ತಿಳಿವಿನ ಮಣಿದಂತಿಹುದು
ಮುಖವದು ಮೋಕ್ಷದ ಫಲದಂತಿಹುದು
ದಾಡಿಯ ತತ್ವದ ಮಳೆಯಂತಿಹುದು
ನುಡಿಯಾನಂದದ ಹೊನಲಂತಿಹುದು
ಶಾಂತಿಯ ದಾಂತಿಯ ಮೃದುವಾಣಿಯಲಿ
ಸರಸ ಸುಗೀತದ ನುಡಿ ಚಾಳ್ಮೆಯಲಿ
ತತ್ವಜ್ಞಾನಿಯು ಹೇಳುತ ನಿಂತ
ತತ್ವನ ಹೇಳುತ ಚೌಕದಿ ನಿಂತ.
"ಘನತರ ತತ್ವನ ಹೇಳುವೆ ನಿಮಗೆ
ಅಲ್ಲಾ ಕೊಡುವನು ಸೌಖ್ಯವ ನಿಮಗೆ
ಬೀದಿಯ ಮಾತೆಂದರಿಯಲು ಬೇಡಿ
ಘನ ತತ್ವಾಮೃತ, ಸವಿಯನ್ನು ನೋಡಿ,
ಹಿಂದಿನ ಕತೆಯನು ಹೇಳುವೆ ನಿಮಗೆ
ಇಂದಿನ ಗತಿಯದು ತಿಳಿವುದು ನಿಮಗೆ
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ