ಪುಟ:ಕವಿಯ ಸೋಲು.pdf/೧೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯು ಸೋಲು

ಇಸ್ಲಾಂ ಧರ್ಮ ಸನಾತನ ಧರ್ಮ
ಜಗವನು ಉಳಿಸುವ ಉನ್ನತ ಧರ್ಮ,
ಕಡಿದಾಡುವ ಬಡಿದಾಡುವ ಜನರ
ಮಕ್ಕಳ ಹೆಣ್ಣಳ ಕೊಲ್ಲುವ ಜನರ
ಕಲ್ಲೂ ಮಣ್ಣೂ ಪೂಜಿಪ ಜನರ
ಸಭ್ಯರ ಮಾಡಲು ಒಟ್ಟಿಗೆ ಮಾಡಲು
ದೇವರು ಯೋಚಿಸಿ ಹೊರಟನು ಮುಂದೆ
ಒಡನೆಯೆ ಸೈತಾನ್ ಹೊರಟನು ಹಿಂದೆ
ದೇವರು ಸಂಕಲ್ಪಿಸಿ ಹೊರಟಿರಲು
ಬೆನ್ನಲೆ ಸೈತಾನನು ಬರುತಿರಲು
ದೇವರು ಕೇಳಿದ ಜೋದ್ಯವಪಟ್ಟು
ಮನದಲಿ ಕರುಣವ ಸಂಕಟಪಟ್ಟು
'ಎಲ್ಲಿಗೆ ಪಯಣವು ? ಏನುದ್ದೇಶ ?
ಆರಿಗೆ ಹೂಡಿದೆ ಸರ್ವ ವಿನಾಶ ?'
ಸೈತಾನ್ ಎಂದನು ನಗೆ ಸೂಸುತ್ತ
ವಕ್ರದ ನೋಟವ ನೆರೆ ಬೀರುತ್ತ
'ನಿನ್ನಯ ಕೆಲಸಕೆ ಅರಬೀಸ್ಥಾನ
ಎನ್ನದು ಕೆಲಸಕೆ ಹಿಂದೂಸ್ಥಾನ'
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ"

ಈ ಮಾತನ್ನು ಕೇಳಿದ ಕೆಲ ಜನರು
"ಇವನೊಬ್ಬನು ಹೆದ್ದಾಡಿದ ಸಾಬಿ