ಪುಟ:ಕವಿಯ ಸೋಲು.pdf/೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ಆರಿಗು ಸಗ್ಗದ ಸಾಬಿಯೆ ಸಾಜ
ಹಂಗಿಲ್ಲದ ಬಾಳ್ಳೆಯೆ ಬಲು ತಾಜ
ತೇಜೆಯ ಹೂಡುವ ತೇಜದಿ ಬಾಳುವ
ರಾಜನ ಪದವಿಯ ಬದಿಗೊತ್ತಾಳುವ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ,
ಪಾಸನು ಮಾಡಿದ ಜಾಣರು ನೀವು
ಹಂಗಿನ ಭಿಕ್ಷವ ಬೇಡುವ ನೀವು
ಮಾನವ ತಿಳಿಯದೆ ಮಾನವ ತೊರೆದು
ಬಣ್ಣನೆ ಮಾತನು ಕಲಿತಾಡುವಿರಿ
ಸಾಜನ ರಾಜನ ಬರಿದೇಳಿಸಿರಿ,
ದುಡಿವುದೆ ಮಾನವು ಬೇಡಪಮಾನ
ಒಮ್ಮನದಿಂ ದುಡಿದವ ಸುಲ್ತಾನ
ಸುಮ್ಮನೆ ಕುಳಿತರೆ ಬರಿಯಪಮಾನ
ಅವರನ್ನು ಹಿಡಿದುಂಬುವ ಸೈತಾನ.
ಜಟಕಾ ಚಕ್ರವ ಸಾಬಿಯು ಹಿಡಿದು
ಸೈತಾನನ ಸೋಮಾರಿಯ ಕಡಿದು
ಅಲ್ಲಾ ಮೆಚ್ಚಲು ಸೈ ಸೈ ಎನಲು
ತಾನದಿ ಗಾನದಿ ನೆರೆ ಬದುಕೆನಲು
ಬದುಕುವ ಜಟಕಾ ಹೊಡೆಯುವ ಸಾಬಿ
ಮೆಚ್ಚುವಳವನನು ಕಮಲದ ಬೀಬಿ.
ತುರುಕರ ಮಾತಿಗೆ ಸೈತಾನ್ ಬಾರ
ಆವಕೋಲುಮೆಗೆ ಕೊಡುವನು ಬಂಗಾರ
ಬಾಳಿನ ನಾಡಿನ ಮೇಲಧಿಕಾರ
ನಿಮಗೇನಿರುವುದು ಬರಿಯಂಗಾರ !