ಪುಟ:ಕವಿಯ ಸೋಲು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಹಿಂದಿನ ಜಟಕ ಹೊಡೆಯುವ ಸಾಬಿ
ಇಂದಿನ ಉತ್ತಮ ತತ್ವಜ್ಞಾನಿ;
ಜಟಕಾ ಹೊಡೆದವ ಸುಲ್ತಾನಾಗುವ
ಸುಮ್ಮನೆ ಕುಳಿತವ ಅವನಾಳಾಗುವ,
ಓದಿದ ಚಾಣರು! ಹೇಳುವುದೇನು
ಓದಿತು ತಿಳಿ ನೀವೋದಿದರೇನು ?
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಭಿಮಾನಿಗಳಾಗಿ,
ದೇವರು ಒಬ್ಬನೆ, ಪೈಗಂಬರರೆ
ದೇವರ ದೂತರು, ಮತ್ತಾರಿಲ್ಲ
ಇಸ್ಲಾಂ ಧರ್ಮ ಸನಾತನ ಧರ್ಮ
ಉಳಿದದ್ದೆಲ್ಲಾ ಸೈತಾನ್ ಧರ್ಮ,
ಒಂದೇ ದೇವರು, ಒಂದೇ ಮತವು
ಸರ್ವ ಸಮರ್ಪಕ ತುರುಕರ ಮತವು
ನೀವೇ ಸೇರಿ ತುರುಕರ ಮತಕೆ
ಈ ಮತ ಬರುವುದು ನಿಮ್ಮಭಿಮತಕೆ.?
ಗುಂಪಿನ ತುಂಟರು ಆರೂ ಕೆಲರು
"ಹೆಂಡಿರ ಮಕ್ಕಳ ಬಿಟ್ಟೋಡಿದವ !
ತತ್ವನ ಹೇಳುವ ಬಲು ಭಂಟಿನಿವ!
ತತ್ವವ ಕೇಳುವ ಹೆಡ್ಡರು ನಾವು
ನಡಯಿರೋ ಕೆಲಸಕೆ ಹೋಗುವ ನಾವು "
ಎಂದಾಜ್ಞಾನಿಯ ಜರಿದಾಡಿದರು.


ಶಾಂತಿಯ ಸತ್ಯದ ನಸುನಗೆಯಲ್ಲಿ
ಮನಸನು ಸೆಳೆಯುವ ಹೊಸ ಬಗೆಯಲ್ಲಿ