ವಿಷಯಕ್ಕೆ ಹೋಗು

ಪುಟ:ಕವಿಯ ಸೋಲು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ಮೋಕ್ಷವ ಪಡೆಯುವ ವೀರರು ನೀವು
ಬಿಡಿ ಬಿಡಿ ನಿಂತರೆ ತುರು, ಕರು, ನೀವು
ಸೈತಾನ್ ಹುಲಿಗಳ ಬಾಯಿಗೆ ನೀವು
ಎಂದೇ ಪರಿಯಲಿ ತತ್ವಜ್ಞಾನಿ
ನುಡಿಯಲು, ಹೇಳಿದ ಮಹದಭಿಮಾನಿ
ನ್ಯಾಯಾಧೀಶನು ಖಾತಿಯಲಾಗ
"ವರ್ಷದ ಶಿಕ್ಷೆಯ ಕೊಟ್ಟಿಹೆನೀಗ
ಶಾಂತಿಯ ರಕ್ಷಣವೆ ಮಾಡಲೆ ಬೇಕು
ಕ್ರಾಂತಿಯ ಮೊಳಕೆಯ ತುಳಿಯಲೆ ಬೇಕು
ಜೈಲಲ್ಲಿದ್ದರೆ ಹುಚ್ಚಿಳಿಯುವುದು
ಕುದಿಯುವ ಮೆದುಳದು ತಂಪಾಗುವುದು"
ಎಂದಾಡುತ ವಂದಕೆ ತೆರಳಿದನು
ತತ್ವಜ್ಞಾನಿಯು ನಗೆಸೂಸಿದನು.


ಆದುದು ತತ್ವಜ್ಞಾನಿಗೆ ಶಿಕ್ಷೆ
ಶಾಂತಿಯ ಬದುಕಿಗೆ ಕಟ್ಟಿದ ರಕ್ಷೆ.
ಅವನನು ತಂದರು ಜೈಲಿನ ಮನೆಗೆ
ಜನರು ಬೀಗವ ಕಿರುಬಾಗಿಲಿಗೆ,
ಹಿಗ್ಗಿದ ಜನರೊಡನೆಯೆ ಕುಗ್ಗಿದರು
ಕಣ್ಣೀರಿಕ್ಕುತ ಮನೆ ಸೇರಿದರು.


ನ್ಯಾಯಾಧೀಶನು ಮಲಗುವ ಮನೆಯಲಿ
ನಿದ್ದೆಯ ಮಾಡುತ ನಟ್ಟಿರುಳಿನಲಿ
ಬೆಚ್ಚುತ ಬೆದರುತ ಕಂಪಿಸುತಾಗ
ನೀನಾರೆನ್ನುತ ಕೂಗಿದನಾಗ

೧೫