ಪುಟ:ಕವಿಯ ಸೋಲು.pdf/೨೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

"ಕಲ್ಲಿನ ಗೋಡೆಯು ಕಬ್ಬಿಣ ಬಾಗಿಲು
ವಿರಿಹೆಯೆಂತೋ ಕಟ್ಟಿನ ಕಾವಲು !”
ತತ್ವಜ್ಞಾನಿಯು ನಸುನಗುತೆಂದನು
"ನಾನೇ ಬಂದಿಹೆ ಅಂಜಿಕೆಯೇನು ?
ಅಂಗೈ ಹಣ್ಣಿಗೆ ಕನ್ನಡಿಯುಂಟೆ ?"
ಕ್ರಾಂತಿಯ ಉದ್ಧಮ ತಡೆಯುಂಟೆ ?
ಕಾಲಜ್ಞಾನಿಗೆ ಗೋಡೆಗಳುಂಟೆ ? :
ಎಂದಾ ಕಿಟಿಕಿಯ ಬಾಗಿಲು ತೆರೆದನು
ನಸುನಗುತಲ್ಲಿಂ ಮೆಲ್ಲಗೆ ನಡೆದನು.
ತತ್ವಜ್ಞಾನಿಯು ಜೈಲಲ್ಲಿರುವನು
ಊರಲ್ಲಿರುವನು ನಾಡಲ್ಲಿರುವನು
ಮನೆ ಮನೆಯಲ್ಲೂ ಅವನೇ ಇರುವನು
ದೇಶದ ತುಂಬಾ ಅವನೇ ಇರುವನು.
ಸತ್ಯವ ತಡೆಯುವ ಗೋಡೆಗಳುಂಟೆ ?
ಜ್ಞಾನಿಯ ತಡೆಯುವ ಸರಳುಗಳುಂಟೆ ?

೧೬