ಪುಟ:ಕವಿಯ ಸೋಲು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಲ್ಲಿಗೆ?

ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ
ತೆರಳುತಿಹ ಭೀತಿಯಿಹುದು ;
ಮೇಲೆ ವಿಷವೀಚಿ ಮಲೆಗಳು ನುಗ್ಗುತ್ತ
ಬರುತಿಹವು ಕೊಚ್ಚುತಿಹವು.

ಕುರುಡಾದ ನಿಯಮವೊ ಕುಂಟಾದ ವಿಧಿಗಳೊ
ಈವರೆಗೆ ಪೊರೆದುವಯ್ಯ ;
ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು
ಕಾವುದನು ಕಾಣೆನಯ್ಯ

ಬಂಡೆಗಳು ಏನಿಹಿ ನೀರಸುಳಿಯೇನಿಹುದೊ
ಕತ್ತಲೆಯು ಮುತ್ತುತಿಹುದು;
ಕಂಡ ದಾರಿಯಮಲ್ಲ ಹೇಳುವರು ಮೊದಲಿಲ್ಲ
ಎತ್ತಲುಂ ಜ್ಯೋತಿಯಿಲ್ಲ.

ಸುತ್ತಲುಂ ಉರಿದಾಹ ಜೀವನಕೆ ಬಡಿದಾಟ
ತಿಮಿತಿಮಿಂಗಿಲದ ನೋಟ
ಸಾತ್ವಿಕದ ರಾಜಸದ ಬುಗ್ಗೆಗಳು ತೋರಿಲ್ಲ
ಸಮತೆ ಸೈರಣೆಗಳಿಲ್ಲ.

೩೭