ಪುಟ:ಕವಿಯ ಸೋಲು.pdf/೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಪೂಜಾರಿ
ದೇವರ ಸತ್ಯವು ಊರಲಿ ಹರಡಿತು
ಬಂದರು ಭಕ್ತರು ತಮತಮಗೆ |
ಹೂವನು ಕಾಯನು ಹಣ್ಣನು ಜೋಡಿಸಿ
ತಂದರು ಹರಕೆಯ ಬೇಡಲಿಕೆ.

ದೇವರ ಮಹಿಮೆಯು ಹೆಚ್ಚಾಗಿರುವುದು
ಕರುಗುಡಿ ಬಾಗಿಲು ಬಿಗಿದಿಹುದು
ದೇವರ ನೆಡಲು ಕಂಡಿಗಳಿರುವುವು
ಕಿರುಬಾಗಿಲ ಬೆಳಕಂಡಿಗಳು.

ಬಂದವರೆಲ್ಲರು ಕಾಯಿಗಳೊಡೆವರು
ಹೊರಗಡೆ ಕರ್ಪುರ ಹಚ್ಚುವರು |
ತಂದಿಹ ಮುಡುಪನು ದೇವರು ಕೊಳ್ಳಲು
ಹೊರಗಡೆ ತಪ್ಪದೆ ಬಿಟ್ಟಿಹರು.

ಸಂಕಟಪಟ್ಟವರೊಬ್ಬರೆ ಬಂದರೆ
ಸಂಜೆಯಲೇಕಾಂತದಲಿ |
ಬಿಂಕವ ಬಿಟ್ಟಾ ದೇವರು ನುಡಿವನು
ಅಂಜಿಕೆ ಕಳೆವನು ನಲ್ಮೆಯಲಿ.

೪೭