ಪುಟ:ಕವಿಯ ಸೋಲು.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಪೂಜಕನಾವನೊ ಕಣ್ಣಲಿ ಕಾಣರು
ಅನುದಿನ ಪೂಜೆಯು ನಡೆಯುವುದು ?
ಜಾಜಿಯ ಮಲ್ಲಿಗೆ ಹೊಸ ಹೂಮಾಲೆಯು
ದಿನ ದಿನ ಕೊರಳಲಿ ಮೆರೆಯುವದು.

ಸತ್ಯದ ದೇವರು ಏಳಡಿ ಎತ್ತರ
ಮರಡಿ ಪೀಠದ ಮೇಲಿಹನು |
ನಿತ್ಯದ ಪದವಿಯನೀಯುವ ದೇವರು
ಮೂರಿಹನೆಲ್ಲರ ಮಹಿಮೆಯನು.

ಉಟ್ಟಿಹ ಪೀತಾಂಬರ ಮಿರಮಿರುಗುತ
ಭಕ್ತರ ಮನವನು ಸೆಳೆಯುವುದು |
ತೊಟ್ಟಿಹ ಆಭರಣವು ಝಗಝಗಿಸುತ
ಭಕ್ತರ ಕಂಗಳ ಕೊರೆಯುವುದು.

ದೇವರ ಮುಂಗಡೆ ನಂದಾದೀವಿಗೆ
ದೀಪಸ್ತಂಭವು ಬೆಳಗುವುದು |
ಜೀವನ ದೇವನ ಸತ್ಯಸ್ವರೂಪ
ದೀಪ್ತಿಯೆ ಎಂಬುದ ತೋರುವುದು.

ದೇವರ ಮುಖವನ್ನು ನೋಡುತ ನಿಂದನು
ಕಣ್ಣೀರ್ಗರೆಯುತ ಪೂಜಾರಿ |
“ಏವೆನು ದೇವರೆ!” ಎನ್ನುತ ಬಿಕ್ಕುತ
ಕಣ್ಣೀರ್ಗರೆದನು ಪೂಜಾರಿ.

೪೮