ಪುಟ:ಕವಿಯ ಸೋಲು.pdf/೬೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ಎಲ್ಲವ ನೋಡಿಯು ಮನದಿ ನಿಂದು
ಇಕ್ಕಿದೆ ಶೂಲವ ಎನ್ನೆದೆಗೆ |
ಸುಳ್ಳಿನ ಬಾಳೆಗೆ ಲಂಚ ಕೊಡಿಸಿ
ಅಕ್ಕನ ಮೆಲ್ಲನೆ ಮಾಡಿಸಿದೆ.

ನಾಳೆಯೆ ಬರುವರೆ ಇಂದೇ ಬರುವರೋ
ದುಕ್ಕವ ಕಣ್ಣಲಿ ಸೂಸುತ್ತ |
ಬಾಳನು ಕೆಡಿಸಿದ ಮೋಸದ ದೇವರು
ಮುಕ್ಕನ ಹೂಳೆಂದಾಡು ;

ಪೊರೆಯುವೆನೆನ್ನು ತ ಮುಡುಪನು ತಿಂದನು
ನಾಚದೆ ಹೊಟ್ಟೆಯ ಕುದಿಸಿದನು |
ಕರುಣಾಹೀನಗೆ ಕರುಣವ ತೋರದೆ
ಆಚೆಗೆ ತಳ್ಳಿ ದೇವರನು.

ಎಂದವರೆಲ್ಲರು ದುಃಖದಿ ಕೋಪದಿ
ಬಂದೀ ಗುಡಿಯನ್ನು ಮುತ್ತುವರೊ !
ಇಂದೇ ಹೊತ್ತಿಸಿ ಗುಡಿಯನ್ನು ಹೊತ್ತಿಸಿ
ಅಂದದ ಮೂರ್ತಿಯು ಸೀಯುವರೋ

ನಿನ್ನಿಂದಲ್ಲವೆ ಎನಗೀ ಪಾಪವು
ಹೃದಯವ ಬೇಯಿಪ ಸಂಕಟವು !
ನಿನ್ನಂತೆಯೆ ನಾನೂ ಕಲ್ಲಾದರೆ
ಒದಗದು ಎನಗೀ ವೇದನೆಯು.

೫೦