ಪುಟ:ಕವಿಯ ಸೋಲು.pdf/೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ನಾಳೆಯೆ ಮೂರ್ತಿಯನೊಡೆವೆನು
ಭಕ್ತರಿಗರಿಪೆನು ಮೋಸವನು |
ಮಳನ ತಪ್ಪನ್ನು ಮನ್ನಿಸಿರೆನ್ನುತ
ಭಕ್ತರ ಕಾಲಲ್ಲಿ ಬೀಳುವೆನು.

ಬೇಡುವೆನವರಾ ಪಾದದ ಧೂಳಿಯ
ಇಕ್ಕುತ ಶಿರದಲಿ ಬೇಡುವೆನು |
ಕೋಡಿಯ ಹರಿಯಿಸಿ ಕಣ್ಣೀರಿಂದಲಿ
ಭಕ್ತರ ಪದಗಳ ತೊಳೆಯುವೆನು.”

ಎನುತಾ ದೇವರ ನೋಡುತ ನಿಂದನು
ದುಃಖದಿ ತುಂಬಿದ ಪೂಜಾರಿ |
ಏನೊಂದುತ್ತರ ಬಾರದೆರಲು
ದುಃಖದಿ ಹೊರಟನು ಪೂಜಾರಿ.

ಹಣ್ಣೂ ಕಾಸೂ ಕಾಯಿಗಳೆಲ್ಲವ
ತಂದನು ದಿನ ದಿನ ತರುವಂತೆ 1
ಕಣ್ಣ ಕಾಲೂ ಇಲ್ಲದ ಬಡವರ
ಮಂದಿಗೆ ಕೊಟ್ಟನು ಬಿಡದಂತೆ,

ದೇವರ ಒಡವೆಯ ದೇವರಿಗೊಪ್ಪಿಸಿ
ಹೊತ್ತಿಹ ಭಾರವಳುಹಿದನು |
ನೋವನು ಮಾಣಿಸಿ ಆರಿಗು ಕಾಣದೆ
ಕತ್ತಲೆ ದಾರಿಯ ಹಿಡಿದಿಹನು.

೫೧