ಪುಟ:ಕವಿಯ ಸೋಲು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


ಮರುದಿನ ತಪ್ಪದೆ ಸುತ್ತಿಗೆ ಹಾರೆಯ
ತಂದನು ದುಃಖದಿ ಪೂಜಾರಿ !
ಕಿರುಬಾಗಿಲ ಬೀಗವ ಬಿಗಿದಿಕ್ಕುತ
ನಿಂದನು ಒಳಗಡೆ ಪೂಜಾರಿ,

ಶಿಲ್ಪಿಯು ಮಾಡಿದ ಭಕ್ತಿಯ ಕಾಣಿಕೆ
ಚೆಲುವನು ತುಂಬಿದ ಮೂರ್ತಿಯದು |
ಕಲ್ಪಿಸಿ ದೇವರ ಹೃದಯದಿ ಕಾಣುತ
ನಲವಿಂ ಮಾಡಿದ ವರ್ತಿಯುದು,

ಸುತ್ತಿಗೆ ಹಾಕಿಯ ಭೀತಿಯು ತೋರದು
ಸೌಮ್ಯದ ಮೂರ್ತಿಯ ಮುಖದಲ್ಲಿ |
ಚಿತ್ತದಿ ನಗುವಂತಾ ಬಾಯ್ದೆರೆಗಳು
ರಮ್ಯದ ತೆರದಿವೆ ಮುಖದಲ್ಲಿ.

ಪೆರೆನೊಸಲಲಿ ತಿದ್ದಿದ ಮುಂಗೂದಲು
ಹಿರಿಯ ಕಿರೀಟದ ಮಣಿಕಾಂತಿ |
ಎರಡೂ ಕಿವಿಯಲಿ ತೂಗುವ ಕುಂಡಲ
ಕೊರಳಲಿ ಮೌಕ್ತಿಕ ಹಿತಕಾಂತಿ,

ನೋಡುತ ನಿಂದನು, ನೋಡುತ ನಿಂದನು
ಸುತ್ತಿಗೆ ಹಿಡಿದಾ ಪೂಜಾರಿ |
ಕೂಡಿತು ಕಣ್ಣಲಿ ಚಾರಿತು ಬಿಸಿಹನಿ
ಅತ್ತಲೆ ತಿರುಗಿದ ಪೂಜಾರಿ.

೫೨