ಪುಟ:ಕವಿಯ ಸೋಲು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಹೊರಬಾಗಿಲಲೊಬ್ಬರು ಬರೆ ಕಾಣುತ
ಹಿಂಗಡೆ ಹೋದನು ಭೀತಿಯಲಿ |
ಬರುವರು ಆರೋ ನೋಡುವೆನೆನ್ನುತ
ಹಿಂಗದೆ ಸೋಡಿದ ಮರುಕದಲಿ.

ಕಾಣಲು ಬಂದಳು ಸಾದ್ವೀಮಣಿಯು
ಮಡಿಲಲ್ಲಿರುವುದು ಎಳಗೂಸು |
ಪ್ರಾಣದ ರತ್ನ ವನಪ್ಪುವ ತೆರದಲಿ
ಅಡಗಿಸಿ ಅಪ್ಪಿಹ ಎಳಗೂಸು.

ಒಳಗುಡಿ ಹೊಸ್ತಿಲ ಮೇಲದನಿಟ್ಟಳು
ನೋಡಿದಳಾ ಜೀವದ ಕಣಿಯ
ಘಳಿಲನೆ ದೇವಗೆ ತಾ ಪೊಡಮಟ್ಟಳು
ಬೇಡಿದಳಾ ಲೋಕದ ದಣಿಯು,

"ಆರನು ಹೆತ್ತೆನು ಗಂಡೂ ಹೆಣ್ಣೂ
ಕುಳಿಯಲಿ ಇಟ್ಟೆನು ಆರನ್ನು |
ಹೊರುವುದು ತಪ್ಪದು ಹೆರುವುದು ತಪ್ಪದು
ಬೆಳೆದುದ ಕಾಣೆನು ಒಂದನ್ನು.

ಇದೆಯೋ ದೇವರೆ, ಏಳನೆಯ ಮಗುವು
ನಿನ್ನಿ ಮಡಿಲಲಿ ಹಾಕಿಹೆನು |
ಇದನೋಂದಾದರು ಬೆಳಸುವ ಭಾರ
ನಿನ್ನಯ ಮೇಲೆಯೆ ಇಟ್ಟಿಹೆನು.

೫೩