ಪುಟ:ಕವಿಯ ಸೋಲು.pdf/೬೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ಕಳ ಕಳ ನಗುವಾ ಎಂತಹ ಚೆಲುವಿನ
ರನ್ನದ ಮಗುವೆಂಬುದ ನೋಡು |
ಪುಳಪುಳಕನೆ ಕನ್ನೈದಿಲ ಕಂಗಳ
ನಿನ್ನೆಡೆ ತಿರುಹುತ್ತಿದೆ ನೋಡು;

ಹೃದಯದ ಉತ್ಸವ ಚೆಲುವಿನ ಪುತ್ತಳಿ
ಎನ್ನಯ ತಂದೆಯ ನುಡಿಯುವೆನು |
ಇದನೊಂದಾದರು ಬೆಳೆಯಿಸಿಕೊಟ್ಟರೆ
ಚಿನ್ನದಿ ಮಗುವನು ಸಲಿಸುವೆನು.”

ಆಡಿದ ಮಾತನ್ನು ಕೇಳುತ ಕೇಳುತ
ಕಣ್ಣೀರ್ ತುಂಬಿದ ಪೂಚಾರಿ |
ಬಾಡಿತು ಮುಖವದು ಕಣ್ಣೀರ್ ಹರಿಯಿತು
ಹೆಣ್ಣಿಗೆ ನುಡಿದನು ಪೂಜಾರಿ.

"ಅಳದಿರು ಮಗಳೆ ಅಳದಿರು ತಾಯೀ
ನಿನ್ನೀ ನಗುವನು ಸಲಹುವೆನು |
ಬೆಳೆಯುವ ಮಕ್ಕಳನ್ನೂ ಕೊಡುವೆನು
ರನ್ನದ ಮಕ್ಕಳ ಪೊರೆಯುವೆನು.”

ಆಡಿದ ಭರವಸೆ ಕೇಳುತಲೆದ್ದಳು
ಹರುಷದಿ ಕಂಗಳು ತುಂಬಿರಲು |
ಜೋಡಿಸಿ ಕೈಗಳ “ಸತ್ಯದ ದೇವರೆ
ಕರುಣದಿ ಪೊರೆಯೈ” ಎಂದವಳು

೫೪