ಪುಟ:ಕವಿಯ ಸೋಲು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


"ಕೊಳ್ಳೈದೇವರೆ, ಎನ್ನೀ ಪ್ರಾಣವ
ಉಳುಹಿಸಿಕೊಡು ಪತಿದೇವನನು |
ಒಳ್ಳಿತ ಮಾಡೈ, ಕರುಣವ ತೋರೈ
ಕಳೆಯದೆ ಮಂಗಳಸೂತ್ರವನು.

ತಳ್ಳದಿರೆನ್ನನು ದುಸ್ಸಹ ನರಕಕೆ
ದಳ್ಳುರಿ ವೈಧವ್ಯಕೆಯನ್ನು |
ಕೊಳ್ಳೈ ದೇವರೆ ಸಾಧ್ವಿಯ ಜೀವನ
ಕೊಳ್ಳದೆ ಜೀವದ ಪತಿಯನ್ನು.

ಬಾರೈ ದೇವರೆ, ಎನ್ನ ಯ ಬಾಳಿಗೆ
ನಂಬಿಕೆಯೀಗಲೆ ನುಡಿಯುವುದು |
ಆರುವ ದೀಪಕೆ ಆಯುವ ತೈಲವ
ತುಂಬಿಸಿ ಬೆಳಗಿಸಿ ಕರುಣಿವುದು.

ಸತಿಯಳ ಜೀವವು ಕವಡೆಯು ಬಾಳದು
ಉಳಿದರು ಹೋದರು ಜಗವಳದು |
ಪತಿಯೆಂಬುವ ಸೌಭಾಗ್ಯದ ಸೂರ್ಯನು
ಮುಳುಗಲು ಕಲೆ ಮುಸುಕುವುದು.

ಮರಳೆನು ಮನೆಕಡೆ ಎದೆ ನಡುಗುವುದು
ಮುತ್ತೈದೆಯ ಸಾವಿಚ್ಛಿಪೆನು |
ತೊರೆದಿಹೆ ಭಯವನು ಸಾವಳಿಗೇಕೆ?
ಇತ್ತೀ ಕೊಳದಲೆ ಬೀಳುವೆನು."

೫೬