ಪುಟ:ಕವಿಯ ಸೋಲು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು



"ಲೋಕದ ತೊಡಕನು ಬಿಡಿಸದೆ ದೇವರ
ಪಾಪದ ಭೀತಿಯ ತೊಲಗಿಸದೆ !
ಏಕಿಂತೆಲ್ಲರ ದುಃಖಕೆ ಸಿಕ್ಕಿಸಿ
ತಾಪಕೆ ನೀಗುರಿ ಮಾಡಿಸುವೆ ?

ಲೋಕದ ದುಃಖವ ನೋಡುತ ನೋಡುತ
ಭರವಸೆ ಜೀವನವೆನಿಸುವುದು |
ಸಾಕೈ ದೇವರ ಭರವಸೆ ಕೊಡುವೆನು
ಪೊರೆಯುವ ಶಕ್ತಿಯ ಕರುಣಿಪುದು.

ನಿನ್ನಯ ಹೆಸರಲಿ ನಿನ್ನಯ ಮರೆಯಲಿ
ನೋವನ್ನು ಕಳೆಯಲು ಆಡುವೆನು |
ನಿನ್ನೀ ಮೂರ್ತಿಯನೊಡೆದದ್ದಾದರೆ
ಆವನ ಮರೆಯಲಿ ನಿಲ್ಲುವೆನು.”

ಆಯಿತು ಅಲ್ಲಿಯೆ ಕಾಂತಿಯ ವಿಗ್ರಹ
ಒಡನೆಯೆ ಬೆಳಗಿತು ಮಂದಿರವು |
ಭಯದಿಂದರ್ಚಕ ಕೈಗಳ ಮುಗಿದನು
ಹಿಡಿದನು ದೇವರ ಪದಗಳನು.

ಮಂದಸ್ಮೇರವ ದೇವರು ಬೀರುತ
ಮುಂದಿನ ಮಾತನು ಆಡಿದನು |
"ಮಂದಿಯ ಸಲಹಿದೆ ನೀನೇ ದೇವರು
ಕುಂದದೆ ನೀಡಿದೆ ಅಭಯವನು.

೫೮