ಪುಟ:ಕವಿಯ ಸೋಲು.pdf/೬೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ದಯವೇ ದೇವರು, ದೇವರ ದಯೆಯು
ಭರವಸೆ ತಪ್ಪದೆ ಫಲಿಸುವುದು |
ಭಯದಲಿ ರಕ್ಷಣೆ ಬೇಡುವ ದೀನರ
ಪೊರೆಯುವ ಶಕ್ತಿಯು ದೊರೆಯುವದು.

ಗೊಡ್ಡೋ ಗಿಡ್ಡೋ ನಂಬಿಕೆಯಿದ್ದರೆ
ತೊರೆಯನು ದಾಟಿಪ ಹರುಗೋಲು |
ಗಡ್ಡೆಯನೇರಿಸಿ ಕಷ್ಟವ ನೀಗಿಸಿ
ಕರೆಯನು ಕಾಣಿಪ ಸಾಧನವು."

ಬೆಳಕೂ ಮಾತೂ ಅಡಗಲು ಒಡನೆಯೆ
ಮೆಲ್ಲನೆ ಎದ್ದನು ಪೂಜಾರಿ |
ಕಳೆದುವು ಕೆಲದಿನ, ದೇವರು ಕರೆದನು
ಅಲ್ಲಿಗೆ ಹೋದನು ಪೂಜಾರಿ.

ಬಿತ್ತರ ದೇಗುಲವಲ್ಲಿಯೆ ಇರುವುದು
ದೇವರು ಒಳಗಡೆ ನಿಂದಿಹನು |
ಸುತ್ತಿಗೆ ಹಾರೆಯು ಮೂಲೆಯಲ್ಲಿರುವುದು
ಆವನೊ ಅರ್ಚಕ ಕಾಣುವನು.

ದೇವರ ಸತ್ಯವು ಮಾಸುತ ಬಂದಿತು
ಗೋಡೆಯ ಕಲ್ಗಳು ಉರುಳಿದುವು !
ಸೇವೆಗೆ ಬಂದವರೆಲ್ಲರು ಕದಿಯುತ
ಮಾಡದ ಮನೆಗಳ ಕಟ್ಟಿದರು.

೫೯