ಪುಟ:ಕವಿಯ ಸೋಲು.pdf/೭೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ವೇದಾಂತ

   ವೇದಾಂತ ಹೇಳಬಹುದು
   ಎಲ್ಲರೂ ಕೇಳಬಹುದು
   ಶಾಲನ್ನು ಸುತ್ತಿಕೊಂಡು
   ಬಿರುದನ್ನು ಧರಿಸಿಕೊಂಡು
   ವ್ಯಾಖ್ಯಾನ ಮಾಡಬಹುದು
   ಪುಸ್ತಕವ ಬರೆಯಬಹುದು
   ವೇದಾಂತ ಸಮಯಕ್ಕೆ ಬರುವುದೇನು ?
   ಕರುಳನ್ನು ಸಂತವಿಡಲಪ್ಪುದೇನು ?

   ಕಷ್ಟಗಳು ಬಂದು ಮುತ್ತಿ
   ದುಃಖಗಳು ಬಂದು ಒತ್ತಿ
   ರೋಗಗಳು ಬಂದು ಹತ್ತಿ
   ಸಾಲಗಳು ಬಂದು ಸುತ್ತಿ
   ಕಣ್ಣು ಬಿಡುತಲಾಗ
   ಮತಿಗೆಟ್ಟು ಹೋಗುವಾಗ
   ವೇದಾಂತ ಬರುವುದನ್ನು ನೋಡಬೇಕು
   ವೇದಾಂತ ನುಡಿವುದನು ಕೇಳಬೇಕು.

೬೩