ಪುಟ:ಕವಿಯ ಸೋಲು.pdf/೭೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

   “ಎನ್ನ ಕಂದನ್ನ ಕೊಡಿರಿ
   ಎನ್ನ ರತ್ನನ್ನ ಕೊಡಿರಿ”
   ಎಂದಂದು ಬಿಕ್ಕುತ್ತ ಕೇಳುವಾಗ
   ತೊಡೆ ಮೇಲೆ ಜೀವವದು ನಂದುವಾಗ;

   ಊರಾಚೆ ಗುಣಿಯ ತೊಡಿ
   ಇಡಲಲ್ಲಿ ಅಣಿಯ ಮಾಡಿ
   'ಬದುಕಿದೆಯೋ ಏನೋ !' ಎಂದು
   ಭ್ರಮೆಯಿಂದ ಆಸೆ ಬಂದು
   ಮತ್ತೊಮ್ಮೆ ಮುಟ್ಟಿ ನೋಡಿ
   ಕಡೆಗೊಮ್ಮೆ ಮುಖವ ನೋಡಿ
   ಮಣ್ಣಿಂದ ಕಂದನ್ನ ಮುಚ್ಚುವಾಗ
   ಜಗವೆಲ್ಲ ಕಣ್ಗಂದು ಸುತ್ತುವಾಗ;

   ಇವರಾರ ಮಕ್ಕಳೆಂದು
   ಅವರಾರ ನೆಂಟರೆಂದು
   ಋಣ ಶೇಷ ತೀರಿತೆಂದು
   ಸಾಲಿಗರು ಹೋದರೆಂದು
   ಕಣ್ಣೀರು ಬತ್ತಿಸುತ್ತ
   ಎದೆ ಕಲ್ಲು ಮಾಡಿಸುತ್ತ
   ವೇದಾಂತ! ವೇದಾಂತ ! ಇರುವುದೇನು
   ಇದ್ದರೂ ಅದರಿಂದ ಬಂದುದೇನು?

5
೬೫