ಪುಟ:ಕವಿಯ ಸೋಲು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಾಣ-ಕೋಣ

"ಎಲ್ಲಾ ತಿಂಡಿಯು ನನಗೇ ಬೇಕು
ಎಲ್ಲಾ ಹಣ ನನಗೇ ಬೇಕು
ಆರಿಗು ಚರನು ಗೀರನು ಕೊಡೆನು"
ಕೊಡೆನೆನ್ನುತ ಎಳ ಮಗ ಹರಮಾಡಿದನು.

“ಅಣ್ಣನು ತಮ್ಮನು ಎಲ್ಲರು ಇರುವರು
ಅಕ್ಕನು ತಂಗಿಯು ಎಲ್ಲರು ಇರುವರು
ನಾನೂ ಅಮ್ಮಾ ಎಲ್ಲರು ಇರುವೆವು
ಒಂದಿಷ್ಟಿಷ್ಟನು ನಮಗೂ ಕೊಡಬೇಕು."

“ಆರಿಗು ಕೊಡೆನು ಎಲ್ಲವು ನನ್ನದು”
ಎನ್ನುತ ಎಳ ಮಗ ಹಠಮಾಡಿದನು;
ಅಣ್ಣ ತಮ್ಮ ಅಕ್ಕ ತಂಗಿ
ಎವೆಯಿಕ್ಕದೆ ತಿಂಡಿಯ ನೋಡಿದರು.

ಅಪ್ಪನ ಕೈಹಿಡಿದೆಳೆಯುತ ಕೇಳುತ
ಎಳ ಮಗು ಕೈಯಿಂದೆಳೆಯಲು ಹೋಗಿ
ನನಗೇ ತನಗೇ ಎಂದಳುತಿರಲು
ತಂದೆಯು ಮಗನನು ಮುದ್ದಿಸಿ ಆಡಿದನು.

೬೯