ಪುಟ:ಕವಿಯ ಸೋಲು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


"ಬಾರಲೆ ರನ್ನ ! ಹೊಳಪಿನ ಚಿನ್ನ !
ನಗುತಾ ಕೊಟ್ಟರೆ ನೀನೇ ಜಾಣ
ಅಳುತಾ ಕೊಟ್ಟರೆ ನೀನೇ ಕೋಣ
ಕೊಡದಿರೆ ನೀನೆನ್ನಯ ಮಗನಲ್ಲಣ್ಣ.”

ಲೋಕದ ತಂದೆಯು ಮಗುವಿನ ತಂದೆಗೆ
"ಅಹುದೆಲೆ ಮಗನೇ ! ?” ಎನುತಿಂತೆಂದನು
"ನಾ ಹೇಳಲು ಕಹಿ ನೀ ಹೇಳಲು ಸಿಹಿ
ಎಲ್ಲಿಯು ನಡೆಸುವ ಮಕ್ಕಳು ಬಹುಕಡಮೆ.

ನಗುತಾ ಕೊಟ್ಟರೆ ಅವನೇ ಜಾಣ
ಅಳುತಾ ಕೊಟ್ಟರೆ ಅವನೇ ಕೋಣ
ಏನೋ ಎಂತೋ ಏನೂ ಕೊಡದಿರೆ
ಅವನೇನೂ ನನ್ನಯ ಮಗನಲ್ಲಣ್ಣ.”



೭೦