ಪುಟ:ಕವಿಯ ಸೋಲು.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಆಡಿ ತೋರದೊಡೇನು
ಮಾಡಿ ತೋರದೊಡೇನು
ಮಡುತಿರೆ ಮನದಲ್ಲಿ
ಪಾಪ ವಾಸನೆಯಾಯ್ತು

ವಿಷಯಗಳ ಸುಖಕಿಂತ
ಹಿರಿಯ ಸುಖವೊಂದುಂಟು
ಗುರು ಕರುಣ ಬಂದಲ್ಲಿ
ಆ ಸುಖದ ತಿಳಿವುಂಟು

ಹಿರಿಯ ಸುಖ ಕಂಡಾಗ
ಮುಮ್ಮ ಬಂದಡಸುವುದು
ನಾಯಿಗಳು ಸಾಯುವುವು
ಮನವು ಬಯಲಾಗುವುದು.

ಮನಕೆ ಮುಪ್ಪಾಗದೆಯೆ
ಹಿರಿಯ ಸುಖ ತಾನಿಲ್ಲ
ಮನವೆ ಕರ್ಮದ ಮಲ
ಮನವನ್ನೆ ಕೊಲ್ಲುವುದು.

ಈ ಮುಪ್ಪು ಬಂದವರ
ಕಣ್ಣಿಟ್ಟು ಹುಡುಕುತಿರು
ಅವರ ನೆಲೆ ಸಿಕ್ಕಾಗ
ಹಿಂದೆಯೇ ನಡೆಯುತಿರು.

೭೨