ಪುಟ:ಕವಿಯ ಸೋಲು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

   ಕಾರ್ಮೋಡ ತಂಡಗಳು
   ಸಿಡಿಲು ಕಿಡಿಗಳ ಸೂಸಿ
   ನಭದಲ್ಲಿ ಗಜರಿದವು
   ಬೆಟ್ಟಗಳು ಮೊಳಗಿದವು
   ಭೂಮಾತೆ ನಡುಗಿದಳು
   ಕತ್ತಲೆಯ ಮೊತ್ತದಲಿ
   ಕಾಳರಕ್ಕಸಿ ರೂಪು
   ದೆಸೆದೆಸೆಗೆ ಮುಡಿದುದು
   ಪರರೊಡನೆ ಬಯಸುವರ
   ಕಬಳಿಸುವ ತೆರದಲ್ಲಿ.

   ಇಲ್ಲೊಮ್ಮೆ ಮುಳುಗಿದಳು
   ಅಲ್ಲೊಮ್ಮೆ ತೇಲಿದಳು
   ಬಂಡೆಯನು ತಾಗಿದಳು
   ಸಾವೆಂದು ಕೂಗದೆಯೆ
   ಭಯವೇನು ಇಲ್ಲದೆಯೆ
   ತೇಲಿದಳು ಮುಳುಗಿದಳು;
   ಕೊಚ್ಚಿ ಹೋದಳು ದೂರ
   ಪಾಪಿ ನೆಲದಿಂ ದೂರ
   ಮುಳುಗಿದಳು ತೇಲಿದಳು;
   ಸುಳಿಯಲ್ಲಿ ಸಿಕ್ಕಿದಳು
   ಸುಳಿಯೊಡನೆ ಸುತ್ತಿದಳು
   ಬಿಟ್ಟ ಮಂಡೆಯು ಚೆದರಿ
   ಉಟ್ಟ ಸೀರೆಯು ಉಬ್ಬಿ
   ಸುತ್ತುತ್ತ ಇಳಿಯುತ್ತ

೮೩