ಈ ಪುಟವನ್ನು ಪರಿಶೀಲಿಸಲಾಗಿದೆ
ಕವಿಯ ಸೋಲು
ಘೂ.ರಾ.- ಪರಮಪಾತಕ ನೀನು!
- ರವಿಯ ಮರಿಗಳ ತಂದು ಅವರ ಮಧ್ಯದಿ ನಿಂದು
- ಏನೆನ್ನ ಕರೆಯುವೆಯೊ, ಆದರವ ತೋರುವೆಯೋ !
- ಸಾಯೆ ಸರಸಂ ಸಾಕು, ದುರ್ಬುದ್ಧಿಯದು ಸಾಕು
- ನಿನ್ನ ಮನೆ ಹೋಗಲೊಲ್ಲೆ, ನಿರಪರಾಧಿಗಳಾವು,
- ಎಮ್ಮನೀ ಹಳಿದಿರುವೆ ಅಪಮಾನ ಮಾಡಿರುವೆ.
- ಹೇಳಯ್ಯ, ಕಾದ ಸೀಸವನೆಂದು ಸುರಿದೆವೋ
- ನಿನಗೆ ಕೆಡಕೇನು ಮಾಡಿರುವೆವೋ ಹೇಳಯ್ಯ,
- ತಲೆಯೆತೆ ಕೆರಯುವೆಯೋ ಮೇಲೇನು ನೋಡುವೆಯೊ
- ಕಣ್ಣುಗಳನೇಕುಜ್ಜುವೆಯೊ, ಅರಿಯದಂತೇಕೆ
- ನಟಿಸುವೆಯೊ ಆಷಾಢಭೂತಿಯೆಂಬುದ ಬಲ್ಲೆ.
ಕವಿ ರಾ.- ನಿಮ್ಮ ನಾನೆಂದು ಹಳಿದೆನೆ ? ನಿಮಗೆ ನಾನೆಂದು
- ಅಪಮಾನ ಮಾಡಿದೆನೋ ? ನೆನಪಿಲ್ಲ, ನೆನಪಿಲ್ಲ.
- ನೀನಾರೊ ಮೊದಲೆನಗೆ ತಿಳಿದಿಲ್ಲ. ಆರಯ್ಯ?
ಘೂ.ರಾ.-ಅಹುದಹುದು ನೆನಪಿಲ್ಲ! ಏಕಿರುವುದೋ ನಿನಗೆ !
- ಏನಾನುಮೊಂದು ಉಪಕಾರವಂ ನೀ ಮಾಡೆ
- ಬಹುಕಾಲ ನೆನಪಿಹುದು; ದಿಟವಯ್ಯ, ದಿನ ದಿನವು
- ಲೆಕ್ಕವಿಲ್ಲದ ರೀತಿ ಅಪಕಾರ ಮಾಡುತಿರೆ
- ನೆನಪಿಲ್ಲ! ನೆನಪಿಲ್ಲ! ದುಷ್ಟ ಮಾನವ ಜನ್ಮ !
- ಪಕ್ಷಿಗಳು ನಾವು ನಿಮ್ಮಂತಲ್ಲ.
ಕವಿ ರಾ.- ಏಕಯ್ಯ
- ಬಲು ಮುನಿಸು ? ನೆನಪಾಗದೆಂದು ದಿಟ
- ನುಡಿಯುತಿರೆ ಏನೇನೋ ಆಡುತಿದೆ, ದೂರುತಿಹೆ.
ಘೂ.ರಾ.- ರಕೋಪವನವನ್ನು ನಾವೆಲ್ಲ ಬಿಟ್ಟಿಹೆವು.
- ನೀನವರ ನಮಗೆ ಹೋಲಿಸಬಹುದೆ? ಹೇಳಯ್ಯ,೮೮