ಪುಟ:ಕವಿರಾಜ ಮಾರ್ಗಂ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಕವಿರಾಜಮಾರ್ಗ

ಕಾರಕಮಾಯಿ ಕರ್ಮಕರಣಾದಿಕದಿಂ ಪ್ರಥಮಾದಿಭೇದನಿ ರ್ಧಾರದಿಂದದಂ ಪಿಡಿದು ನಿಲ್ವ ವಿಭಕ್ತಿಗಳೇಟೆನಿಕ್ಕುಮಾ ಚಾರುಗುಣೋದಯಂ ವಚನಮೇಕಬಹುಕ್ರಮದಿಂದೆರರ (ತಾ)ರಯೆ ಪೇ ನಿಂತಿವು ಜಾತಿವಿಭಾಗ ಗುಣಾಗುಣಂಗಳು ೧೧೪

ನರಪತಿ ಬಂದನಾ ನೃಪನನತ್ತೆಯೆ ಕಾಣ್ಣುದು ತನ್ನರೇಂದ್ರನಿಂ ಧರಣಿ ಸನಾಥ ಭೂಪತಿಗೆ ಕಪ್ಪವನಿತ್ತವನೀಶನತ್ತಣಿಂ ಪರಿಭವಮಂ ಕಲ್ಬುವುದಧೀಶ್ವರನಾ ದಯೆಸಾಲುಮಾ ಮಹೀ ಶ್ವರನೊಳಿದಪ್ಪುದೆಂಬುದಿದು ಕಾರಕಯುಕ್ತ ವಿಭಕ್ತನುಕ್ರಮಂ ೧೧೫

ಬರವೆಮಗೀಗೆ ದೇವತೆಗಳಾದರದಿಂ ಕರುಣಿಪ್ಪುದಕ್ಕೆ ಬಂ ದುರಗುಣ ಬಂದುಸಂತತಿಯನೆಂಬುದು ಕಾರಕದೋಷಮಾಗಳುಂ ಬರವನಮೋಘಮೀಗೆಮಗೆ ದೇವತೆಗಳ್ ಕರುಣಿಪ್ಪುದಕ್ಕೆ ಬಂ ಧುರ ಗುಣಬಂಧುಸಂತತಿಗೆ ನಿಕ್ಕುವಮೆಂಬುದದುಷ್ಟಕಾರ(ಕಂ) ೧೧೬

ನಿಕ್ಕುವಮಿಂತುಮಲ್ಲದದ(ಆ)ಕ್ರಿಯೆ ಸಾರ್ದಿರ ಪತ್ತಿ ಮುಂದೆ ಸ ಹೈಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣವಾಗಿ ತಗುಳಿರೆ ಮೇಣ್ ಕ್ರಿಯಾಪದಂ ೧೧೭

ಬಂದುವು ಪಾವುಡಂ ನೃಪತಿಗೆಂಬುದುಮಾನೆಗಳೇ ಪ್ರದೇಶದೊಳ್ ನಿಂದುದಿದೆಂಬುದುಂ ವಚನದೋಷವಿಶೇಷಮನೈಪುಣೋಕ್ತಿಯಿಂ ಬಂದುದು ಪಾವುಡಂ ನೃಪತಿಗೆಂಬುದುಮಾನಗಳೇ ಪ್ರದೇಶದೊಳ್ ನಿಂದುವಿವೆಂಬುದು ಬಗೆದು ನೋಡೆ ಗುಣಂ ವಚನಕ್ಕೆ ನಿಕ್ಕುವ೦ ೧೧೮

ಜಾತಿವಿಭಾಗಮಂ ಬಗೆದು ಪೇಟಿಕಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಳುಗುಂ ೧೧೯