ಪುಟ:ಕವಿರಾಜ ಮಾರ್ಗಂ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಪಾದಕನ ಅರಿಕೆ
(ವಿದ್ಯಾರ್ಥಿ ಆವೃತ್ತಿ)

ನಾನು ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ (೧೯೩೧-೩೩) ನನ್ನ ವಿದ್ಯಾಗುರು ದಿವ೦ಗತ ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯ ಚರಿತ್ರೆಯ ಪಾಠದ ಅಂಗವಾಗಿ ಕವಿರಾಜಮಾರ್ಗದ ಕೆಲವು ಭಾಗಗಳನ್ನು ಸ್ಥೂಲವಾಗಿ ತಿಳಿಯಹೇಳಿದರು. ಕವಿರಾಜಮಾರ್ಗದ ಕರ್ತೃತ್ವದ ವಿಚಾರವಾಗಿ ಅವರಿಗೂ ನಾ.ಶ್ರೀ. ರಾಜಪುರೋಹಿತರಿಗೂ ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ನಡೆದಿದ್ದ ಪತ್ರವ್ಯವಹಾರವನ್ನು ನಾನು ಆಸಕ್ತಿಯಿಂದ ಓದಿದ್ದು ಆಗಲೇ. ಮದ್ರಾಸು ವಿಶ್ವವಿದ್ಯಾನಿಲಂಯುದವರು ಅದೇ ತಾನೇ ಕವಿರಾಜವರಾರ್ಗದ ದ್ವಿತೀಂಯು ಮುದ್ರಣವನ್ನು ಹೊರತಂದಿದ್ದರು. ಆಗ ಮದರಾಸಿನಿಂದ ಪ್ರಕಟವಾಗುತ್ತಿದ್ದ "ಪ್ರಜಾಮತ" ವಾರಪತ್ರಿಕೆಗೆ ಹೋದ ವಿಮರ್ಶೆಯ ಪ್ರಶಕಿ ವಿಮರ್ಶೆಗೆಂದು ನನ್ನ ಬಳಿ ಬ೦ದಿತು. ವಿದ್ವಾಂಸರೊಬ್ಬರು ಮಾಡಬೇಕಾಗಿದ್ದ ಕಾರ್ಯವನ್ನು ನನ್ನಂತಹ ಅಪರಿಣತ ವಿದ್ಯಾರ್ಥಿಯೊಬ್ಬನು ಮಾಡುವುದು ಹೇಗೆ ಎಂದು ಅಧೀರನಾಗಿ ಹಿ೦ಜರಿಯುತ್ತಿದ್ದ ನನ್ನನ್ನು ಉತ್ತೇಜಿಸಿ ವಿಮರ್ಶೆಯನ್ನು ಮಾಡಿಸಿದವರು ವೆಂಕಣ್ಣಯ್ಯನವರು. ಅಂದಿನಿಂದ ನಾನು ಕವಿರಾಜಮಾರ್ಗದ ಭಕ್ತ

ಈಗ್ಲೆ ಮೂರು ನಾಲ್ಕು ವರ್ಷಗಳ ಹಿಂದೆ ಬಿ.ಎ. ಪದವಿ ಪರೀಕ್ಷೆಗೆ ಕನ್ನಡವನ್ನು ಪ್ರಧಾನ (Major) ವಿಷಯವಾಗಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಕವಿರಾಜಮಾರ್ಗವನ್ನು ನಾನು ಪಾಠ ಹೇಳಬೇಕಾಗಿ ಬ೦ದಿತು. ಆಗ ನನಗೆ ಗೋಚರವಾಯಿತು, ಕವಿರಾಜಮಾರ್ಗವನ್ನು ಪಾಠ ಹೇಳಬೇಕಾದರೆ ಕೇವಲ ಗ್ರಂಥಭಕ್ತಿ ಸಾಲದು ಎಂಬ ಸತ್ಯಸಂಗತಿ; ಅದನ್ನು ಪಾಠಮಾಡಬೇಕಾದ ಅಧ್ಯಾಪಕನ ಬವಣೆ ಎಂಥದು ಎಂಬ ನಿಜ ವಿಚಾರ, ಗ್ರಂಥದ ಮುದ್ರಿತ ಪ್ರತಿಗಳಲ್ಲಿ ಕಂಡುಬರುತ್ತಿದ್ದ ಪಾಠಗ್ರಂಥಿಗಳು, ಅರ್ಥಕ್ಷೇಶಗಳು, ಸಹಾಯಕ ಟಿಪ್ಪಣಿಗಳ ಕೊರತೆ—ಇವೆಲ್ಲ ಬೋಧಕನನ್ನು ಸವಾಲು ಹಾಕಿ ಎದುರಿಸುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಎಲ್ಲಿಯೂ ಒಂದು ಪ್ರಕಿ ಕೂಡ ದೊರಕದಿದ್ದ ಪರಿಸ್ಥಿತಿ ನನಗೆ ತುಂಬ ವ್ಯಥೆಯನ್ನುಂಟುಮಾಡಿತು; ಏನಾದರೂ ಪರಿಹಾರ ಹುಡುಕುವಂತೆ