ವಿಷಯಕ್ಕೆ ಹೋಗು

ಪುಟ:ಕವಿರಾಜ ಮಾರ್ಗಂ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಿನ್ನಹ

ಹೊರತರಬೇಕೆಂದು ಶ್ರೀ ಡಿ.ವಿ.ಕೆ. ಮೂರ್ತಿಯವರು ಎರಡು ವರ್ಷಗಳ ಹಿಂದೆಯೆ ಸೂಚಿಸಿದರು. ಅವರ ವಿಶ್ವಾಸದ ಒತ್ತಾಯದ ಫಲ ಈ ಕಿರಿಯ ಆವೃತ್ತಿ.

ಹಿಂದಿನ ಆವೃತ್ತಿಯ ಸುಮಾರು ೧೦೦ ಪುಟಗಳ ಪೀಠಿಕೆಯನ್ನು ಇಲ್ಲಿ ಕೇವಲ ಮೂವತ್ತೈದು ಪುಟಗಳಿಗೆ ಇಳಿಸಬೇಕಾದದ್ದು ಅನಿವಾರ್ಯವಾಯಿತು. ಆದರೂ, ಹೇಳಬೇಕಾದ ಮುಖ್ಯ ಸಂಗತಿಗಳನ್ನೆಲ್ಲ ಪೀಠಿಕೆಯಲ್ಲಿ ಅಡಕ ಮಾಡಿರುವುದಲ್ಲದೆ, ಆ ಗ್ರಂಥ ಪ್ರಕಟವಾದ ಮೇಲೆ ವಿದ್ವಾಂಸರು ಮುಖ್ಯವಾಗಿ ಕರ್ತೃತ್ವ ವಿಚಾರವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಮನಿಸಿ ವಿಮರ್ಶಿಸಲಾಗಿದೆ ; ಗಮನಕ್ಕೆ ಬಂದ ಒಂದೆರಡು ಹೊಸ ಅಂಶಗಳನ್ನೂ ಸೇರಿಸಿದೆ. ಒಟ್ಟಿನ ಮೇಲೆ, ವಿಷಯ ವಿವೇಚನೆಯನ್ನು ಕೂಡಿದಮಟ್ಟಿಗೂ ಇಂದಿನವರಗಿನ (up-to-date) ವಿಚಾರಸೀಮೆಗೆ ತಂದು ನಿಲ್ಲಿಸಿದ. ಪೀಠಿಕೆಯನ್ನು ಯಾವ ಕಾರಣಕ್ಕಾಗಿ ಸಂಕ್ಷೇಪಿಸಬೇಕಾಯಿತೋ ಅದೇ ಕಾರಣಕ್ಕಾಗಿ ಟಿಪ್ಪಣಿಗಳ ವಿಭಾಗವನ್ನೂ ಪಾಠಾಂತರಗಳು, ನಾಮಸೂಚಿ, ಮುಂತಾದ ಅಧ್ಯಯನ ಪರಿಕರಗಳನ್ನುಳ್ಳ ಅನುಬಂಧಗಳನ್ನೂ ಕೈಬಿಡಬೇಕಾಯಿತು. ಆದರೆ, ಹೊಸದಾಗಿ ಸೇರಿಸಿರುವ ಶಬ್ದಕೋಶದಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸ್ವಲ್ಪಮಟ್ಟಿಗೆ ಸಹಾಯವಾಗುವುದೆಂದು ನಂಬಿದ್ದೇನೆ.

ಹಿಂದಿನ ಮುದ್ರಣದಲ್ಲಿ ಉಳಿದುಕೊಂಡು ಬಂದಿದ್ದ ಹಲಕೆಲವು ದೋಷಗಳನ್ನು ಪರಿಹರಿಸಿ, ಗ್ರಂಥಪಾಠವನ್ನು ಮೇಲ್ಪಾಟು ಮಾಡಿದ ; ಹಾಗಿದ್ದೂ ಪಾಠ ಕೇಶಗಳು ಇಲ್ಲದಿಲ್ಲ; ಹೊಸ ಹಸ್ತಪ್ರತಿಗಳ ನೆರವು ಸಂಗಡಿಸಿದಲ್ಲದೆ, ಅವುಗಳ ಪರಿಹಾರ ಸಾಧ್ಯವಿಲ್ಲ.

ವಿದ್ವದಭಿಮಾನಿಗಳೂ ಶಾಸ್ತ್ರಗ್ರಂಥಗಳ ಪ್ರಕಟನೆಯಲ್ಲಿ ಅಮಿತ ಉತ್ಸಾಹವುಳ್ಳವರೂ ಆದ ಶ್ರೀ ಡಿ. ವಿ. ಕೆ. ಮೂರ್ತಿಯವರ ಸೂಚನೆ, ಉತ್ತೇಜನ ಒತ್ತಾಯಗಳಿಲ್ಲವಾಗಿದ್ದರೆ, ಕವಿರಾಜಮಾರ್ಗದ ಈ ಆವೃತ್ತಿಯನ್ನು ಸಿದ್ಧಪಡಿಸುವ ಯೋಚನೆಯನ್ನು ಮಾಡುತ್ತಿರಲಿಲ್ಲ. ಸರ್ವವಿಧಗಳಲ್ಲೂ ಇದರ ಪ್ರಕಟನೆಗೆ ಕಾರಣಕರ್ತರಾದ ಅವರಿಗೆ ನಾನು ಅತ್ಯಂತ ಋಣಿಯಾಗಿದ್ದೇನೆ ; ಅವರ ಶ್ರೇಯಸ್ಸನ್ನು ಕೋರುತ್ತೇನೆ. ಪುಸ್ತಕವನ್ನು ತುಂಬ ಅಚ್ಚುಕಟ್ಟಾಗಿ ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀ ಜಿ.ಎಸ್. ಮೂರ್ತಿಯವರಿಗೂ ನಾನು ಕೃತಜ್ಞ

ಏಪ್ರಿಲ್ ೧೦, ೧೯೭೫
ಎಂ. ವಿ. ಸೀತಾರಾಮಯ್ಯ
ಬೆಂಗಳೂರು

.