ನರಸಿಂಹಾಚಾರರು ಸಮರ್ಥವಾಗಿ ಖಂಡಿಸಿದ್ದಾರೆ. ಈ ವಾದದಲ್ಲಿ ಸ್ವಲ್ಪವೂ ಹುರುಳಿಲ್ಲ. ಶಾಸನಗಳಲ್ಲಿ ದೊರೆಯುವ ನೃಪತುಂಗಪರವಾದ ಬಿರುದುಗಳು ಕವಿರಾಜಮಾರ್ಗದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಸಿಕ್ಕುತ್ತವೆ. ಆದರೆ, ಶ್ರೀವಿಜಯ ಎಂಬುದು ಅಷ್ಟು ಪ್ರಸಿದ್ಧವಾದ ಬಿರುದಾಗಿದ್ದಲ್ಲಿ, ಅದು ಯಾವೊಂದು ಶಾಸನದಲ್ಲಿಯೇ ಆಗಲಿ ಗ್ರಂಥದಲ್ಲಿನ ಇತರ ಬಿರುದುಗಳಂತೆ ಬೇರೆ ಬೇರೆ ಗ್ರಂಥಸಂದರ್ಭಗಳಲ್ಲಿಯೇ ಆಗಲಿ ಏಕೆ ಕಾಣಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ.
(ii) 'ಶ್ರೀವಿಜಯ' ಇದು ನೃಪತುಂಗನ ಕೃತಿಮುದ್ರಿಕೆ ಎಂಬುದು ಇನ್ನೊಂದು ವಾದ. ಇದನ್ನು ಎತ್ತಿರುವವರು ಡಾ|| ಕೆ. ಕೃಷ್ಣಮೂರ್ತಿಗಳು. ಈ ವಾದದ ಸಾರಾಂಶ : ಭಾರವಿ ತನ್ನ ಕಾವ್ಯ 'ಕಿರಾತಾರ್ಜುನೀಯ'ದಲ್ಲಿ 'ಲಕ್ಷ್ಮೀ ಎಂಬ ಮುದ್ರೆಯನ್ನು ಉಪಯೋಗಿಸಿದ್ದಾನೆ; ಈ ಕಾವ್ಯದ ಕೆಲವು ಶ್ಲೋಕಗಳನ್ನು ಕವಿರಾಜಮಾರ್ಗಕಾರನು ನಿದರ್ಶನಾಲಂಕಾರಕ್ಕೆ ಕೊಡುವ ಲಕ್ಷ್ಮ ಪದ್ಯಗಳಲ್ಲಿ ಭಾವಾನುವಾದ ಮಾಡಿದ್ದಾನೆ; ಅವನ ಮಾದರಿಯನ್ನು ಅನುಸರಿಸಿ, 'ಶ್ರೀವಿಜಯ ಎಂಬ ಮುದ್ರೆಯನ್ನು ಇಟ್ಟುಕೊಳ್ಳುವುದರಲ್ಲಿ ಮಾತ್ರ ಭಾರವಿಯನ್ನು ಅನುಸರಿಸಿ, 'ನೃಪತುಂಗದೇವಕೃತ' ಎಂದು ಹೇಳದ, 'ನೃಪತುಂಗದೇವಾನುಮತಮಪ್ಪ' ಎಂದು ಏಕೆ ಹೇಳಿದೆ? ಈ ಪ್ರಶ್ನೆಗೆ ಸಮಂಜಸವಾಗಿ ಉತ್ತರ ಹೇಳುವುದು ಸಾಧ್ಯವಿಲ್ಲ.
(iii) 'ಶ್ರೀವಿಜಯ' ಎಂಬುದು ನೃಪತುಂಗನ ಆಚಾರ್ಯಮುದ್ರ ಎಂಬುದು ಇನ್ನೊಂದು ಅತ್ಯಂತ ಈಚಿನ ವಾದ. ದುರ್ಗಸಿಂಹನು (ಕ್ರಿ.ಶ. ೧೦೩೧) ಒಂದು ಪದ್ಯದಲ್ಲಿ “ಶ್ರೀವಿಜಯರ ಕವಿಮಾರ್ಗಂ" ಎಂದು ಹೊಗಳಿದ್ದಾನೆ. ಜಿನಸೇನಾಚಾರರು ನೃಪತುಂಗನ ಗುರು ಎಂದು ಬಹುಮಂದಿ ವಿದ್ವಾಂಸರು ಒಪ್ಪಿರುವರಪ್ಪ, ಶ್ರೀವಿಜಯ ಜಿನಸೇನರ ಅಂಕಿತವೆಂದೂ, ಅವರು 'ಕವಿಮಾರ್ಗ'ವನ್ನು ರಚಿಸಿದ್ದರೆಂದೂ ದುರ್ಗಸಿಂಹನ ಹೇಳಿಕೆಗೆ ಉಪಪತ್ತಿಯನ್ನು ಕಲ್ಪಿಸಿ, ಶ್ರೀವಿಜಯನ (ಎಂದರೆ ಜಿನಸೇನರ) ಮೂಲಕೃತಿ “ಕವಿಮಾರ್ಗ'ವನ್ನು ರಚಿಸಿರುವನು-ಎಂಬುದು ಈ ವಾದದ ಸಾರಾಂಶ ; 'ಶ್ರೀವಿಜಯ ಪ್ರಭೂತ' ಇತ್ಯಾದಿ ಮಾತುಗಳಿಂದ ಅರ್ಥವಾಗುವ 'ಶ್ರೀವಿಜಯನಿಂದ ಹುಟ್ಟಿದ್ದು' ಎನ್ನುವುದಕ್ಕೆ 'ಶ್ರೀವಿಜಯ (ಜನಸೇನ) ರಚಿತ ಕವಿಮಾರ್ಗ ಎಂದು ಸಾಮಂಜಸ್ಯವನ್ನು ಕಲ್ಪಿಸಲಾಗಿದೆ. "ಶ್ರೀವಿಜಯ ಪ್ರಭೂತ ———————— ೫. ಶ್ರೀ ಭೀಮರಾವ್ ಚಿಟಗುಪ್ಪಿಯವರು ತಮ್ಮ 'ಕವಿರಾಜಮಾರ್ಗ ಪ್ರಶಸ್ತಿ' ಎಂಬ ಗ್ರಂಥದಲ್ಲಿ (ಮನ್ವಂತರ ಪ್ರಕಾಶನ, ಧಾರವಾಡ೧೯೭೨) ಈ ವಾದವನ್ನು ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. (ಪು. ೧೩೫-೧೪೮).