ವಿಷಯಕ್ಕೆ ಹೋಗು

ಪುಟ:ಕವಿರಾಜ ಮಾರ್ಗಂ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಕವಿರಾಜಮಾರ್ಗ

ಲಕ್ಷ್ಯಪದ್ಯಗಳಲ್ಲಿ, ಕೆಲವು, ಆ ಘಟನೆಗಳ ಹಿನ್ನೆಲೆಯನ್ನು ಪ್ರತಿಧ್ವನಿಸುವಂತಿರುವ. 'ರಾಜಕೀಯ ಧ್ವನಿ'ಯನ್ನು ಒಳಗೊಂಡಿವೆ; ಇನ್ನು 'ಕೆಲವು, ಒಳಹೊರಗಿನ. 'ಅರಾತಿಸಮಿತಿ'ಯನ್ನು ಕೊಂದಮೇಲೆ ರಾಜ್ಯದ ಆಡಳಿತಕ್ಕೂ. ಕಾವ್ಯ ಶಾಸ್ತ್ರ. ಧರ್ಮ ಮುಂತಾದ ಶಾಂತಿಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಗಮನವೀಯುತ್ತಿದ್ದ ಉದಾರನೀತಿಯ ನೃಪತುಂಗನ ಪ್ಯಕತ್ವನ್ನು ಬಣ್ಣಿಸುವಂತಿವೆ.* ೩ನೆಯ ಪರಿಚ್ಛೇದದ ೧೮೦-೧೮೧ನೆಯ ಲಕ್ಷ್ಯ ಪದ್ಯಗಳಲ್ಲಿ “ಪ್ರಣತಾರ'ಯಾದ. ರಾಜ್ಯದಲ್ಲಿ ಸುಪ್ರತಿಷ್ಠಿತನಾಗಿ ಸಿಂಹಾಸನಾರೂಢನಾದ *ವೀರನಾರಾಂಯಣ' ನೃಪತುಂಗನ ವರ್ಣನೆಯಿರುವುದು ನಿಸ್ಸಂದಿಗೃ. ಕವಿರಾಜಮಾರ್ಗದಲ್ಲಿ ಉಕ್ತವಾಗಿರುವ ಬಿರುದುಗಳೆಲ್ಲ ಅವನ ಈ ವ್ಯಕ್ತಿತ್ವದ ರೂಪರೇಖೆಯನ್ನೇ ನಿಚ್ಚಳವಾಗಿ ಚಿತ್ರಸುತ್ತಿವೆ. ಕವಿರಾಜಮಾರ್ಗವು `ನೃಪತುಂಗದೇವಾನುಮತೆವಾಗಿದ್ದು. ಅವನ ಆಳಿಕೆಯಲ್ಲಿ ರಚಿತವಾಗಿರುವುದು ಸುನಿಕಿತವಷ್ಟೆ ರಾಜ್ಯವು ಯುದ್ಧಜ್ಜಾಲೆಗೂ ಅಂತಣ್ಣೋಭೆಗೂ ಸಿಲುಕಿರುವ ಕಾಲದಲ್ಲಿ ರಾಜನು ಒಂದು ಲಕ್ಷಣಗಂಥ ರಚನೆಯ ಕಡೆಗೆ ಗಮನ ಹರಿಸಿದ್ದಾನೆ ಎಂಬುದು ಅಸಂಭವ ಎಂಬ ಮಾತು ಹಾಗಿರಲಿ, ಹಾಸ್ಯಾಸ್ಪದ ಎನಿಸೀತು. ನೃಪತುಂಗನಿಗಿಂತ ಬಹು ಈಜಿನ ಗ್ರಂಥಗಳಾದ 'ಶಬ್ಧಮಣಿದರ್ಪಣ' ಮತ್ತು “ಕಾವ್ಯಾವಲೋಕನ'ಗಳಲ್ಲಿ ಪ್ರಯುಕ್ತಗಳಾದ. ಲಕ್ಷ್ಯಪದ್ಯಗಳೂ *ಕೈದುವೋತ್ತರ ದೇವ' ನೃಪತುಂಗನ ಪರಾಕ್ರಮದ ಚಿತ್ರವನ್ನೇ ಮುಂದಿಡುತ್ತಿವೆ.* ನೃಪತುಂಗನ ಆಸ್ಥಾನದ ಮಹಾಪಂಡಿತನೆನಿಸಿದ್ದ ವೈಂಯಾಕರಣಿ. ಶಾಕಟಾಯನನು ತನ್ನ ಸಂಸೃತ ವ್ಯಾಕರಣಕ್ಕೆ ಆಶ್ರಯದಾತನಾದ ಅಮೋಘವರ್ಷನ ಅಂಕಿತವಿಟ್ಟು ಬರೆದ ಅನೋಘವೃತ್ತಿ'ಯಲ್ಲಿ ಅನದೃತನ ಭೂತಕಾಲಕ್ಕೆ ದೃಷ್ಟಾಂತವನ್ನು ಕೊಡುವಾಗ, ಪಾಂಡ್ಯರನ್ನು ಗೆದ್ದು ಅವರನ್ನು ಭಸ್ಮ ಮಾಡಿದನೆಂದು ಬರೆದಿದ್ದಾನೆ? ಹೀಗೆ, ಅಮೋಘವರ್ಷ ನೃಪತುಂಗನು ಅಪ್ರತಿಹತ ಪರಾಕ್ರಮಿ ಎನಿಸಿದಮೇಲೆಂಯೇ “ವೀರನಾರಾಯಣ'ನೆಂದು ಕವಿ ಕೃತಿಗಳಲ್ಲಿಯೂ ಶಾಸನಗಳಲ್ಲಿಯೂ ಕೀರ್ತಿತನಾಗಿರಬೇಕು. ಕ್ರಿಶ. ೮೧೪ರಲ್ಲಿ ಪಟ್ಟಕ್ಕೆ ಬಂದ ನೃಪತುಂಗನು ಈ ಕೀರ್ತಿಗೆ ಭಾಜನನಾಗಲು ಕನಿಷ್ಠ ಪಕ್ಷ ೨೫-೩೦ ವರ್ಷಗಳಾದರೂ ಸಂದಿರಜೇಕು ಎಂದ ಮೇಲೆ, ಕವಿರಾಜಮಾರ್ಗವು ಕ್ರಿಶ. ೮೪೦-೮೭೭ರ ನಡುವಣ ಅವಧಿಯಲ್ಲಿ, ಕ್ರಿಶ. ೮೬೦ರ ಸುಮಾರಿನಲ್ಲಿ, ರಚಿತವಾಗಿರಬೇಕು ಎಂದು ಊಹಿಸಬಹುದು. ಈ ಎರಡು ಗ್ರಂಥಗಳಲ್ಲದೆ, ನೃಪತುಂಗನ ಕಾಲದಲ್ಲಿ ಜೇರೆಯ ಗ್ರಂಥಗಳೂ ರಚಿತವಾಗಿದ್ದವು ಎನ್ನುವುದಕ್ಕೆ ಸ್ಪಷ್ಟಸಾಕ್ಷ್ಯಗಳು ಯಾವುವೂ ದೊರೆತಿಲ್ಲ. "ಅಮೋಘವರ್ಷ' ರಚಿತ ಎಂದಿರುವ.